ಬೀಜಿಂಗ್: ವಿದ್ಯಾಭ್ಯಾಸ ಮುಂದುವರಿಸಲು ಭಾರತೀಯ ವಿದ್ಯಾರ್ಥಿಗಳಿಗೆ ಅನುಮತಿ ನೀಡಲಾಗಿದೆ ಎಂದು ಚೀನಾ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಎರಡು ವರ್ಷಗಳ ಕೊವಿಡ್ ಪರಿಸ್ಥಿತಿಯಿಂದ ಹೊರಬಂದಿರುವ ಚೀನಾ ಇದೀಗ ವಿದೇಶಿ ವಿದ್ಯಾರ್ಥಿಗಳನ್ನು ಆಹ್ವಾನಿಸಿದೆ.

ಈ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಚೀನಾದ ವಾಂಗ್ ಯಿ ಸಭೆ ಮಾರ್ಚ್ 22ರಂದು ಸಭೆ ನಡೆಸಿದ್ದರು.
ಕೊವಿಡ್ನಿಂದಾಗಿ ತಾಯ್ನಾಡಿಗೆ ಮರಳಿದ್ದ ವಿದ್ಯಾರ್ಥಿಗಳು ಈಗ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬಹುದಾಗಿದ್ದು, ಈ ನಿರ್ಧಾರ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲಿದೆ.
ವಿದ್ಯಾರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು ಇದಕ್ಕಾಗಿ ಮೇ 8 ರೊಳಗೆ ಗೂಗಲ್ನಲ್ಲಿ ಅರ್ಜಿ ತುಂಬಬೇಕೆಂದು ವಿದ್ಯಾರ್ಥಿಗಳಿಗೆ ವಿದೇಶಾಂಗ ಸಚಿವಾಲಯ ಮನವಿ ಮಾಡಿದೆ.