HEALTH TIPS

ಭಾರತದಲ್ಲಿ ಕಡುಬಡತನ ಇಳಿಕೆ: ವಿಶ್ವಬ್ಯಾಂಕ್ ವರದಿ, 2011-19ರ ಅವಧಿಯ ಅಂಕಿ ಅಂಶ

           ನವದೆಹಲಿ: ಭಾರತದಲ್ಲಿ ಕಡುಬಡತನ ಸರಾಸರಿ ಶೇ. 12.3ರಷ್ಟು ಕಡಿಮೆ ಆಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 2011 ಮತ್ತು 2109ರ ಅಂಕಿಅಂಶವನ್ನು ತುಲನೆ ಮಾಡಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಡೆಸಿದ ಅಧ್ಯಯನ ಆಧರಿಸಿ ಈ ಅಭಿಪ್ರಾಯವನ್ನು ವಿಶ್ವಬ್ಯಾಂಕ್ ವ್ಯಕ್ತಪಡಿಸಿದೆ.

          2011ರಲ್ಲಿ ಶೇ. 22.5 ಇದ್ದ ಬಡತದ ದರ, 2019ರಲ್ಲಿ ಶೇ. 10.2ಕ್ಕೆ ಇಳಿಕೆ ಆಗಿದೆ ವರದಿ ವಿಶ್ಲೇಷಿಸಿದೆ.

            ಭಾರತದಲ್ಲಿ ಕಡುಬಡತನ ಗಣನೀಯವಾಗಿ ಕುಸಿದಿದೆ. ಅಸಮಾನತೆ ಅಂತರ ತುಸು ಕಡಿಮೆ ಆಗಿದೆ. ಸರ್ಕಾರಗಳು ಕಡುಬಡವರಿಗೆ ವಿತರಿಸುತ್ತಿರುವ ಆಹಾರ ಪಡಿತರದ ಪ್ರಮಾಣ ಕಳೆದ 40 ವರ್ಷದಲ್ಲಿ ಕಡಿಮೆ ಆಗಿದೆ ಎಂದು ಐಎಂಎಫ್​ನ 'ಭಾರತದಲ್ಲಿ ಕಳೆದ ದಶಕದಲ್ಲಿ ಬಡತನ ಇಳಿಕೆ' ಎಂಬ ವರದಿ ತಿಳಿಸಿದೆ. ವಿಶ್ವಬ್ಯಾಂಕ್ ಸಂಶೋಧನಾ ನೀತಿಯ ಭಾಗವಾಗಿ ಈ ಅಧ್ಯಯನ ವರದಿಯನ್ನು ಐಎಂಎಫ್​ನ ಆರ್ಥಿಕ ತಜ್ಞರಾದ ಸುತೀರ್ಥ ಸಿನ್ಹಾ ರಾಯ್ ಮತ್ತು ರಾಯ್ ವ್ಯಾನ್ ಡೇರ್ ವೈಡ್ ಸಿದ್ಧಪಡಿಸಿದ್ದಾರೆ.

           ಹಳ್ಳಿಗಳು ತಗ್ಗಿದ ಬಡತನ: ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾರತದಲ್ಲಿ ಬಡತನದ ದರ ಇಳಿಕೆ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ 2011ರಲ್ಲಿ ಶೇ. 26.3 ಇದ್ದ ಬಡತನ, 2019ರಲ್ಲಿ ಶೇ. 11.6ಕ್ಕೆ ಇಳಿಕೆ ಆಗಿದೆ. ನಗರ ಭಾಗದಲ್ಲಿ ಇದರ ಪ್ರಮಾಣ ಶೇ. 14.2 ರಿಂದ ಶೇ. 6.3ಕ್ಕೆ ಕಡಿಮೆ ಆಗಿದೆ. ಗ್ರಾಮೀಣ ಭಾಗದಲ್ಲಿ ಶೇ. 14.7 ಮತ್ತು ನಗರ ಪ್ರದೇಶದಲ್ಲಿ ಶೇ. 7.9ರಷ್ಟು ಬಡತನದ ದರ ಕುಸಿತವಾಗಿದೆ. ಈ ಮಧ್ಯೆ, 2016ರಲ್ಲಿ ನಗರ ಪ್ರದೇಶದಲ್ಲಿನ ಬಡತನ ಶೇ. 2ರಷ್ಟು ಏರಿಕೆ ಆಗಿತ್ತು. ಇದಕ್ಕೆ ನೋಟು ಅಮಾನ್ಯೀಕರಣದ ಪರಿಣಾಮ ಕಾರಣವಾದರೆ, 2019ರಲ್ಲಿ ಗ್ರಾಮೀಣ ಭಾಗದಲ್ಲಿ ಬಡತನ 10 ಮೂಲಾಂಶದಷ್ಟು ಹೆಚ್ಚಳ ಆಗಿತ್ತು. ಇದಕ್ಕೆ ಹಣಕಾಸು ಹಿಂಜರಿತ ಕಾರಣ ಎಂದು ಅಧ್ಯಯನಕಾರರು ವಿಶ್ಲೇಷಿಸಿದ್ದಾರೆ.

             ಅಸಮಾನತೆ ಅಂತರ ಇಳಿಕೆ: ಖಾಸಗಿ ಸಂಸ್ಥೆಯೊಂದು ನಡೆಸಿದ ಗ್ರಾಹಕರ ಪಿರಮಿಡ್ ಹೌಸ್​ಹೋಲ್ಡ್ ಸರ್ವೆ ಪ್ರಕಾರ, 2011ರಿಂದ ಅಸಮಾನತೆಯಲ್ಲಿ ಇಳಿಕೆ ಕಂಡಿರುವುದು ಕಂಡುಬಂದಿದೆ. ಆದರೆ ಇದರ ಅಂತರ ತೆಳುವಾಗಿದೆ ಎಂದು ಅಧ್ಯಯನದಲ್ಲಿ ಉಲ್ಲೇಖವಾಗಿದೆ.

            ಸಣ್ಣ ಹಿಡುವಳಿದಾರರ ಆದಾಯ ಏರಿಕೆ: ಸಣ್ಣ ಹಿಡಿವಳಿದಾರರ ಆದಾಯದ ಪ್ರಮಾಣ ಶೇ. 10ರಷ್ಟು ಹಿಗ್ಗಿದೆ ಮತ್ತು ದೊಡ್ಡ ಹಿಡುವಳಿದಾರರ ಆದಾಯದಲ್ಲಿ ಶೇ. 2ರಷ್ಟು ಏರಿಕೆ ಆಗಿದೆ ಎಂಬುದು 2013 ಮತ್ತು 2019ರಲ್ಲಿ ನಡೆಸಿದ ಎರಡು ಸಮೀಕ್ಷೆಯಿಂದ ತಿಳಿದು ಬಂದಿದೆ. ಆದರೆ, ವೆಚ್ಚ ಕುರಿತಂತೆ ಭಾರತದಲ್ಲಿ ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆ ಸಂಸ್ಥೆ (ಎನ್​ಎಸ್​ಎಸ್​ಒ) 2011ರಲ್ಲಿ ನಡೆಸಿದ ಸಮೀಕ್ಷೆಯ ಅಂಕಿಅಂಶ ಮಾತ್ರ ಲಭ್ಯವಿದೆ ಹೊರತು ಇತ್ತೀಚಿನ ಡೇಟಾ ಸಿಕ್ಕಿಲ್ಲ ಎಂದು ಅಧ್ಯಯನಕಾರರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries