ನವದೆಹಲಿ: ಕಾರ್ಪೊರೇಟ್ ಮತ್ತು ವ್ಯಾಪಾರ ಗುಂಪುಗಳು 2019-20ನೇ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ 921.95 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದು, ಅದರಲ್ಲಿ ಭಾರತೀಯ ಜನತಾ ಪಕ್ಷವು ಗರಿಷ್ಠ 720,407 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಮಾಹಿತಿ ನೀಡಲಾಗಿದೆ.
ಚುನಾವಣಾ ರಾಜಕೀಯದಲ್ಲಿ ಪಾರದರ್ಶಕತೆ ತರಲು ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆ ಎಡಿಆರ್. 2017-18 ಮತ್ತು 2018-19ರ ಆರ್ಥಿಕ ವರ್ಷಗಳ ನಡುವೆ ರಾಷ್ಟ್ರೀಯ ಸಂಸ್ಥೆಗಳಿಗೆ ಕಾರ್ಪೊರೇಟ್ ಗುಂಪುಗಳು ನೀಡಿದ ಕೊಡುಗೆಯನ್ನು ಬಹಿರಂಗಪಡಿಸಿದೆ. ಒಂದು ಹಣಕಾಸು ವರ್ಷದಲ್ಲಿ 20,000 ರೂ.ಗಿಂತ ಹೆಚ್ಚು ಕೊಡುಗೆ ನೀಡಿದವರ ಬಗ್ಗೆ ರಾಜಕೀಯ ಪಕ್ಷಗಳು ಭಾರತದ ಚುನಾವಣಾ ಆಯೋಗಕ್ಕೆ ನೀಡಿದ ವಿವರಗಳ ಆಧಾರದ ಮೇಲೆ ಈ ವಿಶ್ಲೇಷಣೆ ಮಾಡಲಾಗಿದೆ.
ಬಿಜೆಪಿ, ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ), ತೃಣಮೂಲ ಕಾಂಗ್ರೆಸ್(ಟಿಎಂಸಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್‌ಸಿಸ್ಟ್(ಸಿಪಿಐ-ಎಂ) ದೇಣಿಗೆಗಾಗಿ ವಿಶ್ಲೇಷಿಸಲಾದ ಐದು ರಾಜಕೀಯ ಪಕ್ಷಗಳು ಸೇರಿವೆ.
ಬಿಜೆಪಿ ಮತ್ತು ಕಾಂಗ್ರೆಸ್ ಗರಿಷ್ಠ ದೇಣಿಗೆ ಪಡೆದಿವೆ
ವರದಿಯ ಪ್ರಕಾರ, 2019-20ರ ಹಣಕಾಸು ವರ್ಷದಲ್ಲಿ ಬಿಜೆಪಿಯು 2,025 ಕಾರ್ಪೊರೇಟ್ ದಾನಿಗಳಿಂದ ಗರಿಷ್ಠ 720 ಕೋಟಿ ರೂ. ಪಡೆದಿದ್ದರೆ ಇದರ ನಂತರ, ಕಾಂಗ್ರೆಸ್ 154 ದಾನಿಗಳಿಂದ 133 ಕೋಟಿ ರೂ. ಮತ್ತು ಎನ್ ಸಿಪಿ 36 ಕಾರ್ಪೊರೇಟ್ ದಾನಿಗಳಿಂದ 57 ಕೋಟಿ ರೂ. ಸಿಪಿಐ(ಎಂ) 2019-20ರ ಕಾರ್ಪೊರೇಟ್ ದೇಣಿಗೆಗಳಿಂದ ಯಾವುದೇ ಆದಾಯವನ್ನು ವರದಿ ಮಾಡಿಲ್ಲ.