ನವದೆಹಲಿ : ದೇಶದಲ್ಲಿ 2013ಕ್ಕೆ ಹೋಲಿಸಿದರೆ 2020ರಲ್ಲಿ ನಕ್ಸಲರು ನಡೆಸಿದ ಹಿಂಸಾಚಾರ ಪ್ರಮಾಣ ಶೇ 41ರಷ್ಟು ಮತ್ತು ಅದರಿಂದ ಸಂಭವಿಸಿದ ಸಾವಿನ ಪ್ರಮಾಣ ಶೇ 54ರಷ್ಟು ಇಳಿಕೆಯಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ನವದೆಹಲಿ : ದೇಶದಲ್ಲಿ 2013ಕ್ಕೆ ಹೋಲಿಸಿದರೆ 2020ರಲ್ಲಿ ನಕ್ಸಲರು ನಡೆಸಿದ ಹಿಂಸಾಚಾರ ಪ್ರಮಾಣ ಶೇ 41ರಷ್ಟು ಮತ್ತು ಅದರಿಂದ ಸಂಭವಿಸಿದ ಸಾವಿನ ಪ್ರಮಾಣ ಶೇ 54ರಷ್ಟು ಇಳಿಕೆಯಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಸಚಿವಾಲಯವು ಬಿಡುಗಡೆ ಮಾಡಿದ 2020-21ನೇ ಸಾಲಿನ ವಾರ್ಷಿಕ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.
ಇಂತಹ ಹಿಂಸಾಚಾರ ಕೃತ್ಯಗಳನ್ನು ನಿರ್ಬಂಧಿಸಲಾಗಿದೆ. ಆದರೆ 30 ಜಿಲ್ಲೆಗಳಲ್ಲಿ ಶೇ 88 ರಷ್ಟು ಮಾವೋವಾದಿಗಳ ಹಿಂಸಾಚಾರವಿದೆ. 2013ರಲ್ಲಿ ಸುಮಾರು 10 ರಾಜ್ಯಗಳ 76 ಜಿಲ್ಲೆಗಳಲ್ಲಿನ 328 ಪೊಲೀಸ್ ಠಾಣೆಗಳಲ್ಲಿ ನಕ್ಸಲ್ ಹಿಂಸಾಚಾರ ದಾಖಲಾಗಿದ್ದವು. ಇದು ಇಳಿಕೆಯಾಗಿದ್ದು, 2020ರಲ್ಲಿ 9 ರಾಜ್ಯಗಳ 53 ಜಿಲ್ಲೆಗಳಲ್ಲಿನ 226 ಪೊಲೀಸ್ ಠಾಣೆಗಳಲ್ಲಿ ಹಿಂಸಾಚಾರ ದಾಖಲಾಗಿವೆ ಎಂದು ವರದಿ ಹೇಳಿದೆ.
'ಭಯೋತ್ಪಾದಕತೆ ಭೀತಿ: 64,827 ಕಾಶ್ಮೀರಿ ಪಂಡಿತರ ಕುಟುಂಬ ಕಣಿವೆ ರಾಜ್ಯ ತೊರೆದಿತ್ತು'
1990ರ ದಶಕದ ಆರಂಭದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾಕತೆಯ ಭೀತಿಯಿಂದ 64,827 ಕಾಶ್ಮೀರಿ ಪಂಡಿತರ ಕುಟುಂಬ ಕಾಶ್ಮೀರ ಕಣಿವೆಯನ್ನು ತೊರೆದು ಜಮ್ಮು, ದೆಹಲಿ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ನೆಲೆಸಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ.
'1990ರಿಂದ 2020ರ ನಡುವೆ ಭಯೋತ್ಪಾದನೆಯು ಕಣಿವೆಯಲ್ಲಿ ತಳವೂರಿದ ನಂತರ ಸುಮಾರು 14,091 ನಾಗರಿಕರು ಮತ್ತು 5,356 ಭದ್ರತಾ ಸಿಬ್ಬಂದಿಗಳು ತಮ್ಮ ಜೀವ ಕಳೆದುಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾಕತೆಯು ಗಡಿಯುದ್ದಕ್ಕೂ ಭಯೋತ್ಪಾಕರ ಒಳನುಸುಳುವಿಕೆಗೆ ಕಾರಣವಾಗಿದೆ' ಎಂದು ಗೃಹ ಸಚಿವಾಲಯದ ವಾರ್ಷಿಕ ವರದಿ ಹೇಳಿದೆ.