ಮುಂಬೈ: ಬ್ಯಾಟರ್ ಗಳಾದ ಶಿವಂ ದುಬೆ ಮತ್ತು ರಾಬಿನ್ ಉತ್ತಪ್ಪ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್ ಸಿಬಿ ವಿರುದ್ಧ ಬೃಹತ್ ಮೊತ್ತ ಕಲೆ ಹಾಕಿದೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡದ ಪರ ರಾಬಿನ್ ಉತ್ತಪ್ಪ 89 ರನ್ ಬಾರಿಸಿದ್ದಾರೆ. ಇನ್ನು ರಿತುರಾಜ್ ಗಾಯಕ್ವಾಡ್ 17 ಹಾಗೂ ಮೋಹಿನ್ ಅಲಿ 3 ರನ್ ಪೇರಿಸಿದ್ದಾರೆ.
ಇನ್ನು ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 46 ಎಸೆತಗಳಲ್ಲಿ 8 ಸಿಕ್ಸರ್, 5 ಬೌಂಡರಿ ಸೇರಿದಂತೆ 94 ರನ್ ಪೇರಿಸಿದ್ದಾರೆ. ಒಟ್ಟಾರೆ ನಿಗದಿತ ಓವರ್ ನಲ್ಲಿ ಚೆನ್ನೈ ತಂಡ 4 ವಿಕೆಟ್ ನಷ್ಟಕ್ಕೆ 215 ರನ್ ಪೇರಿಸಿದ್ದು ಆರ್ ಸಿಬಿಗೆ ಗೆಲ್ಲಲು 216 ರನ್ ಗಳ ಬೃಹತ್ ಮೊತ್ತ ನೀಡಿದೆ.
ಆರ್ ಸಿಬಿ ಪರ ವನಿಂದು ಡಿಸಿಲ್ವಾ 2 ಮತ್ತು ಹೆಜಲ್ವುಡ್ 1 ವಿಕೆಟ್ ಪಡೆದಿದ್ದಾರೆ.