ಪುಣೆ: ಐಪಿಎಲ್ 2022ರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ 14 ರನ್ ಗಳಿಂದ ಗೆಲುವು ಸಾಧಿಸಿದೆ.
ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ತಂಡ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿತ್ತು. ಗುಜರಾತ್ ನೀಡಿದ 172 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 157 ರನ್ ಪೇರಿಸಲಷ್ಟೆ ಸಾಧ್ಯವಾಗಿದ್ದು 14 ರನ್ ಗಳಿಂದ ಸೋಲು ಕಂಡಿದೆ.
ಗುಜರಾತ್ ಟೈಟಾನ್ಸ್ ಪರ ಶುಭ್ಮನ್ ಗಿಲ್ 84, ಹಾರ್ದಿಕ್ ಪಾಂಡ್ಯ 31, ಡೇವಿಡ್ ಮಿಲ್ಲರ್ ಅಜೇಯ 20 ರನ್ ಬಾರಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 10, ಮನ್ದೀಪ್ ಸಿಂಗ್ 18, ರಿಷಬ್ ಪಂತ್ 43, ಲಲಿತ್ ಯಾದವ್ 25 ರನ್ ಗಳಿಸಿದ್ದಾರೆ.