ನವದೆಹಲಿ: ವಿಂಡರ್ಜಿ ಇಂಡಿಯಾ 2022, ಮುಂಬರುವ ಮೆಗಾ ವಿಂಡ್ ಎನರ್ಜಿ ಟ್ರೇಡ್ ಫೇರ್ ಮತ್ತು ಕಾನ್ಫರೆನ್ಸ್ ನಲ್ಲಿ ಭಾರತ ಸರ್ಕಾರ ಪಾಲ್ಗೊಳ್ಳುತ್ತಿದೆ. ನವದೆಹಲಿಯಲ್ಲಿ ಏಪ್ರಿಲ್ 27- 29ರಂದು ನಡೆಯಲಿರುವ ಶೃಂಗದಲ್ಲಿ, ಇಂಧನ ಸಚಿವ ಆರ್.ಕೆ. ಸಿಂಗ್, ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಭಗವಂತ ಖೂಬಾ ಪಾಲ್ಗೊಳ್ಳಲಿದ್ದಾರೆ.
2030ರ ವೇಳೆಗೆ ಭಾರತ ಇಂಗಾಲಾಮ್ಲ ಹೊರಸೂಸುವಿಕೆ ಕಡಿಮೆ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಅಲ್ಲದೆ ವಾಯುಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಭಾರತದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಇರುವ ಸಂದರ್ಭದಲ್ಲಿ ಭಾರತ ಪರಿಸರಸ್ನೇಹಿ, ನವೀಕೃತ ಇಂಧನ ಕ್ಷೇತ್ರದತ್ತ ಕಣ್ಣು ಹಾಯಿಸಿದೆ.
ವಿಂಡ್ ಎನರ್ಜಿ ಶೃಂಗವು ಮೂರು ದಿನಗಳ ಕಾಲ ನಡೆಯಲಿದೆ. ಸುಮಾರು 150 ಕಂಪನಿಗಳು ಪಾಲ್ಗೊಳ್ಳಲಿದ್ದು ತಾವು ಅಭಿವೃದ್ಧಿ ಪಡಿಸಿರುವ ಪರಿಸರಸ್ನೇಹಿ ಇಂಧನ ಉತ್ಪಾದನಾ ಟೆಕ್ನಾಲಜಿ ಮತ್ತು ಉಪಕರಣಗಳನ್ನು ಪ್ರದರ್ಶಿಸಲಿವೆ. ಪವನ ಶಕ್ತಿ ಕ್ಷೇತ್ರದಿಂದ ಗ್ರಾಮೀಣ ಭಾಗದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಯಾಗುವ ವಿಶ್ವಾಸವನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ.