ಕಾಸರಗೋಡು: ಕಂದಾಯ ಜಿಲ್ಲಾ ಕ್ರೀಡೋತ್ಸವ 2022ರ ಅಂಗವಾಗಿ ಕಲೆಕ್ಟರೇಟ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಉದ್ಘಾಟಿಸಿದರು. ಎಡಿಎಂ ಎ.ಕೆ.ರಾಮೇಂದ್ರನ್ ಮತ್ತು ಮಂಜೇಶ್ವರ ತಹಸೀಲ್ದಾರ್ ಪಿ.ಜೆ.ಆಂಟೊ ಮಾತನಾಡಿದರು.
ಪುರುಷರ ಸಿಂಗಲ್ಸ್ ನಲ್ಲಿ ಪ್ರದೀಪ್ ಕುಮಾರ್ ಮತ್ತು ಪಿ.ಜೆ.ಆಂಟೊ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು. ಮಹಿಳೆಯರ ಸಿಂಗಲ್ಸ್ ನಲ್ಲಿ ಎಂ.ಎ.ರೆಮ್ಯಾ ಪ್ರಥಮ ಹಾಗೂ ರಜಿನಿ ದ್ವಿತೀಯ ಸ್ಥಾನ ಪಡೆದರು. ಪುರುಷರ ಡಬಲ್ಸ್‍ನಲ್ಲಿ ಸಿ.ಎಚ್.ಫಿರೋಜ್ ಮತ್ತು ಎಂ.ರತೀಶ್ ಜೋಡಿ ಪ್ರಥಮ, ರಾಣಿ ಪಾವೂರು ಮತ್ತು ನಾಮದೇವನ್ ಜೋಡಿ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಡಬಲ್ಸ್ ನಲ್ಲಿ ದೀಪಾ ಮಾರ್ಗರೇಟ್ ಮತ್ತು ಎಂ.ಎ.ರೆಮ್ಯಾ ತಂಡ ಪ್ರಥಮ ಹಾಗೂ ರಜಿನಿ ಮತ್ತು ರೋಸ್ಮಿ ರೋಸಿಲಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಗುಂಪು ಡಬಲ್ಸ್‍ನಲ್ಲಿ ಜಯೇಶ್ ಮತ್ತು ದೀಪಾ ಮಾರ್ಗರೇಟ್ ತಂಡ ಪ್ರಥಮ ಹಾಗೂ ರೋಸಲ್ ದಾಸ್ ಮತ್ತು ರಜಿನಿ ದ್ವಿತೀಯ ಸ್ಥಾನ ಪಡೆದರು.