ಮುಂಬೈ: 2022ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ಗೈಂಟ್ಸ್ ಗೆಲುವು ಸಾಧಿಸಿದೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ಗೈಂಟ್ಸ್ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 169 ಪೇರಿಸಿತ್ತು.
ಲಖನೌ ನೀಡಿದ 170 ರನ್ ಗಳ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 157 ಪೇರಿಸಲಷ್ಟೆ ಸಾಧ್ಯವಾಗಿದ್ದು 12 ರನ್ ಗಳಿಂದ ಲಖನೌಗೆ ಶರಣಾಯಿತು.
ಲಖನೌ ಪರ ಕೆಎಲ್ ರಾಹುಲ್ 68, ಮನೀಶ್ ಪಾಂಡೆ 11, ದೀಪಕ್ ಹೂಡಾ 51, ಅಯೂಶ್ ಬದೋನಿ 19 ರನ್ ಪೇರಿಸಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಅಭಿಶೇಕ್ ಶರ್ಮಾ 13, ಕೇನ್ ವಿಲಿಯಮ್ಸನ್ 16, ರಾಹುಲ್ ತ್ರಿಪಾಠಿ 44, ನಿಕೋಲಸ್ ಪೂರನ್ 34 ಮತ್ತು ವಾಷಿಂಗ್ಟನ್ ಸುಂದರ್ 18 ರನ್ ಪೇರಿಸಿದ್ದಾರೆ.