ನವದೆಹಲಿ: ಬಿಜೆಪಿ ಪಕ್ಷದ 42ನೇ ಸಂಸ್ಥಾಪನಾ ದಿನದ(ಃಎP ಜಿouಟಿಜಚಿಣioಟಿ ಜಚಿಥಿ) ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(Pಒ ಓಚಿಡಿeಟಿಜಡಿಚಿ ಒoಜi) ಬುಧವಾರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. 2022ನೇ ವರ್ಷದ ಮೂರು ಕಾರಣಗಳಿಗಾಗಿ ಅತಿ ಮುಖ್ಯ ವರ್ಷ ಎಂದು ಹೇಳಿದರು.
ಯಾವುವು ಆ ಮೂರು ಕಾರಣಗಳು?: ಈ ವರ್ಷದ ಬಿಜೆಪಿ ಸಂಸ್ಥಾಪನಾ ದಿನ ಮೂರು ಮುಖ್ಯ ಕಾರಣಗಳಿಗಾಗಿ ಅತಿ ಮುಖ್ಯವಾಗಿದೆ. ಮೊದಲನೆಯದಾಗಿ ಈ ವರ್ಷ ನಾವು ಸ್ವಾತಂತ್ರ್ಯ ದಿನದ 75ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಇದು ನಮ್ಮೆಲ್ಲರ ಸ್ಫೂರ್ತಿಗೆ ಬಹಳ ಮುಖ್ಯವಾದ ಸಂದರ್ಭವಾಗಿದೆ.
ಎರಡನೆಯದಾಗಿ, ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿರುವುದರಿಂದ ಭಾರತಕ್ಕೆ ಹೊಸ ಹೊಸ ಅವಕಾಶಗಳು ಬರುತ್ತಿವೆ. ಮೂರನೆಯದಾಗಿ ಬಿಜೆಪಿ ಇತ್ತೀಚೆಗೆ 4 ರಾಜ್ಯಗಳಲ್ಲಿ ಜಯ ಗಳಿಸಿ ಅಧಿಕಾರಕ್ಕೆ ಬಂದಿದೆ. 3 ದಶಕಗಳ ನಂತರ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 100ರ ಗಡಿ ದಾಟಿದೆ ಎಂದರು.
ಯಾವುದೇ ಪಕ್ಷದ ಸರ್ಕಾರವಿರಲಿ ದೇಶಕ್ಕೆ ಏನನ್ನೂ ಮಾಡುವುದಿಲ್ಲ ಎಂದು ಜನ ಹೇಳಿಕೊಂಡಿದ್ದ ಕಾಲವೊಂದಿತ್ತು. ಜನರಲ್ಲಿ ಹತಾಶೆ ಇತ್ತು. ಇಂದು, ದೇಶದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರವು ಬದಲಾಗುತ್ತಿದೆ ಮತ್ತು ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಂದು, ಯಾವುದೇ ಭಯ ಅಥವಾ ಒತ್ತಡವಿಲ್ಲದೆ ತನ್ನ ಹಿತಾಸಕ್ತಿಗಳಿಗಾಗಿ ದೃಢವಾಗಿ ನಿಂತಿರುವ ಭಾರತವು ಪ್ರಪಂಚದ ಮುಂದೆ ಇದೆ. ಇಡೀ ಜಗತ್ತನ್ನು ಎರಡು ಪ್ರತಿಸ್ಪರ್ಧಿ ಸಂಗತಿಗಳಾಗಿ ವಿಂಗಡಿಸಿದಾಗ, ಭಾರತವನ್ನು ಮಾನವೀಯತೆಯ ಬಗ್ಗೆ ದೃಢವಾಗಿ ಮಾತನಾಡುವ ರಾಷ್ಟ್ರವಾಗಿ ನೋಡಲಾಗುತ್ತಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಎರಡು ವಿಧದ ರಾಜಕೀಯ: ಇದೇ ಸಂದರ್ಭದಲ್ಲಿ ಇಂದು ಭಾಷಣದಲ್ಲಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ, ಇಂದು ದೇಶದಲ್ಲಿ ಎರಡು ವಿಧದ ರಾಜಕೀಯವಿದೆ. ಒಂದು ಪರಿವಾರ ಭಕ್ತಿಯ ಪಕ್ಷವಾದರೆ ಮತ್ತೊಂದು ರಾಷ್ಟ್ರಭಕ್ತಿಯ ಪಕ್ಷ ಎಂದು ವಿಶೇಷವಾಗಿ ಕಾಂಗ್ರೆಸ್ ಗೆ ತಿವಿದರು.
ತಾರತಮ್ಯ ಮತ್ತು ಭ್ರಷ್ಟಾಚಾರ ವೋಟ್ ಬ್ಯಾಂಕ್ ರಾಜಕಾರಣದ ದುಷ್ಪರಿಣಾಮಗಳಾಗಿದ್ದು ಈ ಹಿಂದೆ ಅಧಿಕಾರದಲ್ಲಿದ್ದ ಪಕ್ಷಗಳು ಅಭ್ಯಾಸ ಮಾಡಿಕೊಂಡಿದ್ದವು. ಬಿಜೆಪಿ ಅವುಗಳಿಗೆ ಸವಾಲೊಡ್ಡಿ ಮುನ್ನಡೆಯುತ್ತಿದೆ ಎಂದರು.
ಏಪ್ರಿಲ್ 20ರವರೆಗೆ ಸಾಮಾಜಿಕ ನ್ಯಾಯದಡಿ ಪಕ್ಷ ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದು ಈ ಹಿಂದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದರು. ಈ ಅಭಿಯಾನದಡಿ ಪಕ್ಷದ ಕಾರ್ಯಕರ್ತರು ಮೋದಿ ಸರ್ಕಾರದ ಜನರ ಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತದೆ.
ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಏಪ್ರಿಲ್ 14ರಂದು ಕೂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ.