ಪುಣೆ: ಇಂಡಿಯನ್ ಪ್ರಿಮಿಯರ್ ಲೀಗ್ 2022ರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವು ಸಾಧಿಸಿದೆ.
ಪುಣೆಯಲ್ಲಿ ನಡೆದ ಪಂದ್ಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ 4 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತ್ತು. ಮುಂಬೈ ನೀಡಿದ 162 ರನ್ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡ ಇನ್ನು ನಾಲ್ಕು ಓವರ್ ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು.
ಮುಂಬೈ ಇಂಡಿಯನ್ ಪರ ರೋಹಿತ್ ಶರ್ಮಾ 3, ಇಶಾನ್ ಕಿಶಾನ್ 14, ಬ್ರೇವಿಸ್ 29, ಸೂರ್ಯಕುಮಾರ್ ಯಾದವ್ 52, ತಿಲಕ್ ವರ್ಮಾ ಅಜೇಯ 38 ಮತ್ತು ಕೀರನ್ ಪೊಲಾರ್ಡ್ ಅಜೇಯ 22 ರನ್ ಪೇರಿಸಿದ್ದಾರೆ.
ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ ಅಜೇಯ 50, ಶ್ರೇಯಸ್ ಅಯ್ಯರ್ 10, ಸ್ಯಾಮ್ ಬಿಲ್ಲಿಂಗ್ಸ್ 17 ಮತ್ತು ಪ್ಯಾಟ್ ಕಮಿನ್ಸ್ ಅಜೇಯ 56 ರನ್ ಬಾರಿಸಿದ್ದಾರೆ.