ಮುಂಬೈ: ಡಿಕಾಕ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ಗೈಂಟ್ಸ್ ತಂಡ ಇಂಡಿಯನ್ ಪ್ರಿಮಿಯರ್ ಲೀಗ್ ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಡಿವೈ ಪಾಟೀಲ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 149 ರನ್ ಪೇರಿಸಿತ್ತು.
ಡೆಲ್ಲಿ ನೀಡಿದ 150 ರನ್ ಗಳ ಗುರಿ ಬೆನ್ನಟ್ಟಿದ ಲಖನೌ ತಂಡ ಇನ್ನು ಎರಡು ಎಸೆತ ಬಾಕಿ ಇರುವಂತೆ ನಾಲ್ಕು ನಷ್ಟಕ್ಕೆ 155 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಡೆಲ್ಲಿ ಪರ ಪೃಥ್ವಿ ಶಾ 61, ರಿಷಬ್ ಪಂತ್ ಅಜೇಯ 39 ಮತ್ತು ಸರ್ಫರಾಜ್ ಖಾನ್ ಅಜೇಯ 36 ರನ್ ಪೇರಿಸಿದ್ದರು.
ಲಖನೌ ಪರ ಬ್ಯಾಟಿಂಗ್ ನಲ್ಲಿ ಕೆಎಲ್ ರಾಹುಲ್ 24, ಕ್ವಿಂಟನ್ ಡಿಕಾಕ್ 80, ಕೃನಾಲ್ ಪಾಂಡೆ ಅಜೇಯ 19 ರನ್ ಪೇರಿಸಿದ್ದಾರೆ.