ಮಂಜೇಶ್ವರ: ಏಪ್ರಿಲ್ 22 ಹಾಗೂ 23ರಂದು ಕೋಡಿ ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಬೇರಿಕೆಗೋಳಿಯಲ್ಲಿ ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಸುಮಾರು 51ವರ್ಷಗಳ ಬಳಿಕ ಜರಗಲಿದೆ.
ದೈವಜ್ಞರ ಮಾರ್ಗದರ್ಶನದಂತೆ ಪುನರಾರಂಭಗೊಳ್ಳಲಿರುವ ನೇಮೋತ್ಸವದ ಅಂಗವಾಗಿ ಎಪ್ರಿಲ್ 21ರಂದು ಸಂಜೆ 4ರಿಂದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೀಯಪದವು ಅಯ್ಯಪ್ಪಮಂದಿರದ ಮೂಲಕ ಬೇರಿಕೆಗೋಳಿಗೆ ಹಸಿರುವಾಣಿ ಮೆರವಣಿಗೆ ಸಾಗಲಿದೆ.
ಏಪ್ರಿಲ್ 22ರಂದು ಶುಕ್ರವಾರ ಬೆಳಿಗ್ಗೆ ಚಪ್ಪರ ಮುಹೂರ್ತ, ಗಣಪತಿಹವನ ಜರಗಲಿದ್ದು ಸಂಜೆ ಆರರಿಂದ ದೈವಗಳಿಗೆ ತಂಬಿಲ, ಕೋಡಿ ದೈವಸ್ಥಾನದಿಂದ ಭಂಡಾರ ಹೊರಡುವುದು, ಅನ್ನಸಂತರ್ಪಣೆ ಜರಗಲಿದ್ದು, ಬಳಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಊರ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಹಿರಿಯರಂಗನಟ ವಸಂತ ಭಟ್ ತೊಟ್ಟೆತ್ತೋಡಿಯವರಿಂದ ಬಯ್ಯಮಲ್ಲಿಗೆ ಏಕ ವ್ಯಕ್ತಿ ನಾಟಕ ಜರಗಲಿದ್ದು ಬಳಿಕ ಮುಡಿಪಿನ್ನಾರ್ ದೈವದ ನೇಮ ಹಾಗೂ ಮಲರಾಯ, ಬಂಟ ದೈವದ ನೇಮ ಜರಗಲಿದೆ.
ಎಪ್ರಿಲ್ 23ರರಂದು ಶನಿವಾರ ರಾತ್ರಿ ಏಳರಿಂದ ಧಾರ್ಮಿಕ ಸಭೆ ಜರಗಲಿದ್ದು, ಶ್ರೀ ಕ್ಷೇತ್ರದ ಹಿರಿಯರಾದ ಕೋಡಿ ಶಂಕರ ಭಟ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಬೋಳಂತಕೋಡಿ ರಾಮಭಟ್ ದೀಪ ಪ್ರಜ್ವಲನೆ ಗೈಯಲಿದ್ದು, ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ಮೀಂಜ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ಸೇವಾಟ್ರಸ್ಟ್ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ಇದರ ಅಧ್ಯಕ್ಷೆ ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ, ನ್ಯಾಯವಾದಿ ಕಳ್ಳಿಗೆ ಬೀಡು ತಾರಾನಾಥ ಶೆಟ್ಟಿ, ಹೊಸಕಟ್ಟೆ ಶ್ರೀ ರಕ್ತೇಶ್ವರಿ ಸೇವಾಟ್ರಸ್ಟ್ ಅಧ್ಯಕ್ಷ ರಂಜಿತ್ ಹೊಸಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಘುರಾಮ ಭಂಡಾರಿ ಪಳ್ಳತ್ತಡ್ಕ, ಪದ್ಮನಾಭ ರೈ ದರ್ಭೆ, ಬಿ ಸದಾಶಿವ ರೈ ಮಾಜಿ ಅಧ್ಯಕ್ಷರು ಮೀಂಜ ಪಂಚಾಯತ್, ನಾರಾಯಣ ಬಂಗೇರ ಕೊಮ್ಮಂಗಳ ಕೋಡಿ ಬಂಗೇರ ಕುಟುಂಬ ಪ್ರತಿನಿಧಿ ಉಪಸ್ಥಿತರಿರುವರು. ಕೋಡಿ ಶ್ರೀ ರಕ್ತೇಶ್ವರೀ ಸೇವಾಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ, ಕೋಡಿ ಶ್ರೀ ರಕ್ತೇಶ್ವರೀ ಸೇವಾಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಉಪಸ್ಥಿತರಿರುವರು. ರಾತ್ರಿ 8.30ರಿಂದ ಹವ್ಯಾಸಿ ಯಕ್ಷಬಳಗ ಕೋಳ್ಯೂರು ಹಾಗೂ ಅತಿಥಿಕಲಾವಿದರಿಂದ ಶಾಂಭವಿ ವಿಜಯ ಯಕ್ಷಗಾನ ಬಯಲಾಟ ಜರಗಲಿದೆ.
ರಾತ್ರಿಗಂಟೆ 12ರಿಂದ ಶ್ರೀ ರಕ್ತೇಶ್ವರೀ ದೈವನೇಮ, ಕೆಂಡ ಸೇವೆ, ಹಾಗೂ ಪ್ರಸಾದ ವಿತರಣೆ ಜರಗಲಿದೆ ಎಂದು ದೈವ ಕ್ಷೇತ್ರದ ಪ್ರಕಟಣೆ ತಿಳಿಸಿದೆ.