ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವ ಸರ್ಕಾರದ ಎಲ್ಲಾ 24 ಮಂದಿ ಸಚಿವರು ಇಂದು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವ ಸರ್ಕಾರದ ಎಲ್ಲಾ 24 ಮಂದಿ ಸಚಿವರು ಇಂದು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಮುಖ್ಯಮಂತ್ರಿ ತಮ್ಮ ಸಂಪುಟ ಪುನರ್‌ರಚಿಸಲು ಅವಕಾಶ ಕಲ್ಪಿಸಲು ಎಲ್ಲಾ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು, ಏಪ್ರಿಲ್ 11ರಂದು ಹೊಸ ಸಚಿವರು ಸಿಎಂ ಜಗನ್ ಅವರ ಸಂಪುಟ ಸೇರಲಿದ್ದಾರೆ.
ಹೊಸ ಸಂಪುಟ ರಚನೆಯಲ್ಲಿ ಜಾತಿ ಲೆಕ್ಕಾಚಾರ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
2019ರ ಮೇ 30ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಜಗನ್ ಮೋಹನ್ ರೆಡ್ಡಿ ಅವರು ಎರಡೂವರೆ ವರ್ಷಗಳ ಬಳಿಕ ತಮ್ಮ ಸಂಪುಟವನ್ನು ಪುನರ್ ರಚಿಸುತ್ತೇನೆ ಹಾಗೂ ಹೊಸ ತಂಡ ರಚಿಸಿಕೊಳ್ಳುತ್ತೇನೆ ಎಂದು ಘೋಷಿಸಿದ್ದರು. ಈ ಪ್ರಕಾರ 2021ರ ಡಿಸೆಂಬರ್ 8ರಂದು ಜಗನ್ ಅವರು ಸಂಪುಟ ಪುನರ್ ರಚಿಸಬೇಕಿತ್ತು. ಆದರೆ ಕೊರೊನಾ ಸೇರಿ ಇನ್ನಿತರ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.