ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾ ಸೋಂಕು ಮುಂದುವರೆದಿದ್ದು, ದೇಶದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ1,247 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1247 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಇದು ನಿನ್ನೆ ದಾಖಲಾಗಿದ್ದ ಪ್ರಕರಣಗಳಿಗಿಂತ ಸುಮಾರು ಶೇ.43ರಷ್ಟು ಇಳಿಕೆಯಾಗಿದೆ. ನಿನ್ನೆ ದೇಶಾದ್ಯಂತ 2,183 ಹೊಸ ಸೋಂಕು ಪ್ರಕರಣಗಳು ದಾಖಲಾಗಿತ್ತು. ಭಾನುವಾರದ ಪ್ರಕರಣಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ(1,150) ಇದು ಶೇ.89.8 ರಷ್ಟು ಏರಿಕೆಯಾಗಿತ್ತು. ಸೋಂಕು ಪ್ರಕರಣಗಳ ದಿಢೀರ್ ಏರಿಕೆ ಮತ್ತೊಂದು ಅಲೆಯ ಭೀತಿ ಸೃಷ್ಟಿ ಮಾಡಿತ್ತು. ಆದರೆ ಇಂದು ಮತ್ತೆ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ.
ಇಂದಿನ ಹೊಸ ಸೋಂಕು ಪ್ರಕರಣ ಸಂಖ್ಯೆಯೊಂದಿಗೆ ದೇಶದ ಒಟ್ಟು ಸಂಖ್ಯೆ 4,30,45,527ಕ್ಕೆ ಏರಿಕೆಯಾಗಿದೆ. ಅಂತೆಯೇ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 11,860ಕ್ಕೆ ಏರಿಕೆಯಾಗಿದೆ.
ರಾಷ್ಟ್ರೀಯ COVID-19 ಚೇತರಿಕೆ ದರವು ಶೇ.98.76 ಪ್ರತಿಶತದಷ್ಟಿದ್ದು, ದೈನಂದಿನ ಧನಾತ್ಮಕತೆಯ ದರವು 0.31 ಶೇಕಡಾ ಮತ್ತು ಸಾಪ್ತಾಹಿಕ ಧನಾತ್ಮಕ ದರವು 0.34 ಶೇಕಡಾ ಇದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಅಲ್ಲದೇ, ಕೋವಿಡ್ ನಿಂದ ಉತ್ತರ ಪ್ರದೇಶದಲ್ಲಿ ಒಂದು ಸಾವಾಗಿದ್ದು, ಆ ಮೂಲಕ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 5,21,967ಕ್ಕೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 1,86,72,15,865 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.