ಕಾಸರಗೋಡು: ರಂಗಚಿನ್ನಾರಿ(ರಿ)ಕಾಸರಗೋಡು ವತಿಯಿಂದ ಭಾರತರತ್ನ ಪಂಡಿತ್ ಭೀಮ್‍ಸೇನ್ ಜೋಷಿ ಶತಮಾನೋತ್ಸವ ಅಂಗವಾಗಿ ಪಂಡಿತ್ ಭೀಮ್‍ಸೇನ್ ಜೋಷಿ ಅವರ ಅಭಂಗಗಳ ತರಬೇತಿ ಶಿಬಿರ ಏ. 24ರಂದು ಮಧ್ಯಾಹ್ನ 2.30ಕ್ಕೆ ಕಾಸರಗೋಡು ನಗರಸಭಾಂಗಣದ 'ಶ್ರೀ ಕೇಶವಾನಂದ ಭಾರತೀ ವೇದಿಕೆ'ಯಲ್ಲಿ ಜರುಗಲಿದೆ. ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಖ್ಯಾತ ಗಾಯಕ ಶಂಕರ್ ಶ್ಯಾನುಭಾಗ್ ನಿರ್ದೇಶನದಲ್ಲಿ ಕಾರ್ಯಕ್ರಮ ಜರುಗಲಿದೆ. ಖ್ಯಾತ ವೈದ್ಯ ಡಾ. ಅನಂತ ಕಾಮತ್ ಉದ್ಘಾಟಿಸುವರು. ಸಂಜೆ 5.30ಕ್ಕೆ ನಡೆಯುವ ಭಾರತ ರತ್ನ ಲತಾ ಮಂಗೇಶ್ಕರ್ ಅವರಿಗೆ ಪುಷ್ಪಾಂಜಲಿ ಕಾರ್ಯಕ್ರಮ ನಡೆಯುವುದು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡುವರು. ಡಾ. ಶ್ರೀಪಾದ ರಾವ್ ಅಧ್ಯಕ್ಷತೆ ವಹಿಸುವರು. ಸಂಗೀತ ಗುರುಗಳಾದ ಕಲ್ಮಾಡಿ ಸದಾಶಿವ ಆಚಾರ್ಯ, ಬಳ್ಳಪದವು ಯೋಗೀಶ ಆಚಾರ್ಯ, ರಾಮಕೃಷ್ಣ ಕಾಟುಕುಕ್ಕೆ, ದಯಾನಂದ ಕುಮಾರ್ ಹೊಸದುರ್ಗ, ಶಂ.ನಾ ಅಡಿಗ ಕುಂಬಳೆ, ಶಂಕರ್‍ರಾಜ್, ರಾಧಾ ಮುರಳೀಧರ್, ಉಷಾ ಈಶ್ವರ ಭಟ್ ಗೌರವ ಉಪಸ್ಥಿತರಿರುವರು. ಈ ಸಂದರ್ಭ ಖ್ಯಾತ ಗಾಯಕ ಬಾಬೂಜಿ ಭಟ್ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಖ್ಯಾತ ಗಾಯಕ ಶಂಕರ್ ಶ್ಯಾನುಭಾಗ್ ಅವರಿಂದ 'ದಾಸ ಚಂದನ'ಕಾರ್ಯಕ್ರಮ ಜರುಗಲಿರುವುದು.