ತಿರುವನಂತಪುರಂ: ‘ಕಾಶ್ಮೀರ್ ಫೈಲ್ಸ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೇರಳಕ್ಕೆ ಆಗಮಿಸುತ್ತಿದ್ದಾರೆ. ವಿವೇಕ್ ಕೇರಳಕ್ಕೆ ಇದೇ ಮೊದಲ ಬಾರಿ ಭೇಟಿ ನೀಡಲಿದ್ದಾರೆ. ಅನಂತಪುರಿ ಹಿಂದೂ ಮಹಾಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವರು ತಿರುವನಂತಪುರಕ್ಕೆ ಬರುತ್ತಿದ್ದಾರೆ. ಏಪ್ರಿಲ್ 27ರಂದು ಆರಂಭವಾಗಲಿರುವ ಮಹಾಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಅನಂತಪುರಿ ಹಿಂದೂ ಸಮ್ಮೇಳನವು ಏಪ್ರಿಲ್ 27 ರಿಂದ ಮೇ 1 ರವರೆಗೆ ತಿರುವನಂತಪುರಂನ ಸೌತ್ ಪೋರ್ಟ್ ನ ಪ್ರಿಯದರ್ಶಿನಿ ಕ್ಯಾಂಪಸ್ನಲ್ಲಿ ನಡೆಯಲಿದೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸ್ವಾಮಿ ಚಿದಾನಂದಪುರಿ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ಕೇಂದ್ರ ಸಚಿವ ವಿ. ಮುರಳೀಧರನ್, ಕುಮ್ಮನಂ ರಾಜಶೇಖರನ್, ಜನಂ ಟಿವಿ ಸುದ್ದಿ ಸಂಪಾದಕ ಜಿ.ಕೆ.ಸುರೇಶ್ ಬಾಬು, ಪಿಸಿ ಜಾರ್ಜ್, ಕೆ. ಕುಂಞÂ್ಞ ಕಣ್ಣನ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸಮ್ಮೇಳನ ನಡೆದಿರಲಿಲ್ಲ. ಏಪ್ರಿಲ್ 27 ರಿಂದ ಮೇ 1 ರವರೆಗೆ ಐದು ದಿನಗಳ ಕಾಲ ಸಮ್ಮೇಳನ ನಡೆಯಲಿದೆ. ಮೇ 1ರಂದು ನಡೆಯುವ ಸಮಾರೋಪ ಸಮಾರಂಭವನ್ನು ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಉದ್ಘಾಟಿಸಲಿದ್ದಾರೆ. ಹಿಂದೂ ಐಕ್ಯವೇದಿ ರಾಜ್ಯ ಕಾರ್ಯಾಧ್ಯಕ್ಷ ವತ್ಸನ್ ತಿಲ್ಲಂಗೇರಿ ಆಶಯ ಭಾಷಣ ಮಾಡಲಿದ್ದಾರೆ.
ಸಮಾವೇಶದ ಅಂಗವಾಗಿ ಹಿಂದೂ ಯುವ ಸಮಾವೇಶವನ್ನೂ ಆಯೋಜಿಸಲಾಗಿದೆ. ಸಮ್ಮೇಳನವು ಏಪ್ರಿಲ್ 28 ರಿಂದ 1 ರವರೆಗೆ 16 ವಿಚಾರಗೋಷ್ಠಿಗಳನ್ನು ಒಳಗೊಂಡಿರುತ್ತದೆ. ಭಾರತದ ಒಳಗಿನ ಮತ್ತು ಹೊರಗಿನ ಅನೇಕ ಜನರು ಸೆಮಿನಾರ್ನಲ್ಲಿ ಪಾಲ್ಗೊಳ್ಳುತ್ತಾರೆ.