ಪ್ಲೋರಿಡಾ: ನೀವು ಒಂದು ಚಲನಚಿತ್ರವನ್ನು ಎಷ್ಟು ಬಾರಿ ವೀಕ್ಷಿಸಬಹುದು? ಮೂರು ತಿಂಗಳಲ್ಲಿ ಗರಿಷ್ಠವೆಂದರೆ 10ಕ್ಕಿಂತ ಹೆಚ್ಚು ಬಾರಿ ನೋಡಲು ಬೇಸರವೆನಿಸಬಹುದೇನೋ. ಆದರೆ ಇಲ್ಲೊಬ್ಬ ವ್ಯಕ್ತಿ ಒಂದೇ ಸಿನಿಮಾವನ್ನು ಮೂರು ತಿಂಗಳ ಅಂತರದಲ್ಲಿ ಬರೋಬ್ಬರಿ 292 ಬಾರಿ ವೀಕ್ಷಿಸಿದ್ದಾರೆ. ಈ ಮೂಲಕ ಅವರು ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.
ಯುಎಸ್‌ನ ಫ್ಲೋರಿಡಾದ ರಾಮಿರೊ ಅಲಾನಿಸ್ ಅವರು ಕಳೆದ ವರ್ಷ ಡಿಸೆಂಬರ್ 16 ರಿಂದ ಈ ವರ್ಷದ ಮಾರ್ಚ್ 15 ರ ನಡುವೆ ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಚಿತ್ರವನ್ನು 292 ಬಾರಿ ವೀಕ್ಷಿಸಿದ್ದಾರೆ. ಇದಕ್ಕಾಗಿ ಅವರು 720 ಗಂಟೆಗಳು ಅಥವಾ 30 ದಿನಗಳನ್ನು ಕಳೆದಿದ್ದಾರೆ.
ರಾಮಿರೊ ಅಲಾನಿಸ್, ಈ ಹಿಂದೆ, 2019 ರಲ್ಲಿ, ಅವೆಂಜರ್ಸ್: ಎಂಡ್‌ಗೇಮ್ ಅನ್ನು 191 ಬಾರಿ ವೀಕ್ಷಿಸಿದ್ದಕ್ಕಾಗಿ ದಾಖಲೆಯನ್ನು ಸಾಧಿಸಿದ್ದರು. ಆದರೆ ಆ ದಾಖಲೆಯನ್ನು 2021 ರಲ್ಲಿ ಅರ್ನಾಡ್ ಕ್ಲೈನ್ ಮುರಿದಿದ್ದರು. ಅವರು ಕಾಮೆಲೋಟ್ ಚಿತ್ರವನ್ನು 204 ಬಾರಿ ವೀಕ್ಷಿಸಿದರು.
ಇದೀಗ ಮತ್ತೊಮ್ಮೆ ರಾಮಿರೊ ಅಲಾನಿಸ್ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಚಿತ್ರದ ಟಿಕೆಟ್‌ಗಾಗಿ ಅಂದಾಜು $3,400 (ಅಂದಾಜು 2.59 ಲಕ್ಷ ರೂ.) ಖರ್ಚು ಮಾಡಲಾಗಿದೆ.