ಕೋಝಿಕ್ಕೋಡ್: ಶೇ.80ಕ್ಕೂ ಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ದೇಶದಲ್ಲಿ, ಪೆಟ್ರೋಲಿಯಂ ದರಗಳನ್ನು ಏಕೀಕರಣಗೊಳಿಸುವ ಅಗತ್ಯವಿದ್ದು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಬಿಜೆಪಿ ಕೋಝಿಕ್ಕೋಡ್ ಜಿಲ್ಲಾಧ್ಯಕ್ಷ ನ್ಯಾಯವಾದಿ. ವಿ.ಕೆ.ಸಜೀವನ್ ಆಗ್ರಹಿಸಿದರು. ರಾಜ್ಯದ ಇಂಧನ ತೆರಿಗೆಯ ಜೊತೆಗೆ, ರಾಜ್ಯವು ಕೇಂದ್ರ ಅಬಕಾರಿ ತೆರಿಗೆಯ 40 ಪ್ರತಿಶತವನ್ನು ಪಡೆಯುತ್ತದೆ ಎಂದವರು ಬೊಟ್ಟುಮಾಡಿದರು.
ಕೇರಳದೊಳಗೆ ಇರುವ ಮಾಹೆಯಲ್ಲಿ ಪ್ರಸ್ತುತ ಲೀಟರ್‍ಗೆ 13 ರೂ. ಗಳ ವ್ಯತ್ಯಾಸ ಕಂಡುಬರುತ್ತಿದೆ. ಒಂದು ದೇಶ ಒಂದೇ ತೆರಿಗೆ ಎಂಬ ಕೇಂದ್ರ ನೀತಿಯನ್ನು ರಾಜ್ಯ ಸರಕಾರ ಬೆಂಬಲಿಸಬೇಕು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ಮಾಡಿ ಲಾಭ ಮಾಡಿಕೊಳ್ಳುತ್ತಿದೆ ಎಂದು ಸಜೀವನ್ ತಿಳಿಸಿದರು.
ಉದ್ಯೋಗ ಖಾತ್ರಿ ಕೂಲಿಯನ್ನು 311 ರೂ.ಗೆ ಹೆಚ್ಚಿಸಿದ ನರೇಂದ್ರ ಮೋದಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುವ ಮಹಿಳಾ ಮೋರ್ಚಾದ ಅಂಚೆ ಕಾರ್ಡ್ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2014 ರಲ್ಲಿ 126 ರೂ.ಗಳಿಂದ ಪ್ರತಿ ವರ್ಷ ಹೆಚ್ಚಳಗೊಳಿಸುತ್ತಾ ಬಂದಿ ಉದೀಗ 311 ರೂ.ಗೆ ಹೆಚ್ಚಿಸಲಾಗಿದೆ ಎಂದವರು ತಿಳಿಸಿದರು.
ಮಹಿಳಾ ಮೋರ್ಚಾ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕೋಝಿಕೋಡ್ ಪ್ರಧಾನ ಅಂಚೆ ಕಚೇರಿ ಮುಂಭಾಗ ನಡೆದ ಸಮಾರಂಭದಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಡ್ವ.ರಮ್ಯಾ ಮುರಳಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡ್ವ. ಎ. ಕೆ. ಸುಪ್ರಿಯಾ, ಮೀಂಚಂತಾ ವಾರ್ಡ್ ಕೌನ್ಸಿಲರ್ ರಮ್ಯಾ ಸಂತೋಷ್, ಜಿಲ್ಲಾ ಉಪಾಧ್ಯಕ್ಷೆ ಶೋಭಾ ಸುರೇಂದ್ರನ್, ಕಾರ್ಯದರ್ಶಿ ಸೋಮಿತ ಶಶಿಕುಮಾರ್ ಉಪಸ್ಥಿತರಿದ್ದರು.