ತಿರುವನಂತಪುರ: ರಾಜ್ಯದಲ್ಲಿ ಇಂದು 331 ಮಂದಿಗೆ ಕೋವಿಡ್ ಪತ್ತೆಯಾಗಿದೆ. ಎರ್ನಾಕುಳಂ 69, ತಿರುವನಂತಪುರ 48, ಕೊಟ್ಟಾಯಂ 43, ತ್ರಿಶೂರ್ 32, ಕೊಲ್ಲಂ 30, ಕೋಝಿಕ್ಕೋಡ್ 20, ಪತ್ತನಂತಿಟ್ಟ 18, ಇಡುಕ್ಕಿ 16, ಆಲಪ್ಪುಳ 14, ಮಲಪ್ಪುರಂ 13, ಕಣೂರು 9, ಪಾಲಕ್ಕಾಡ್ 7, ವಯನಾಡ್ 7, ಕಾಸರಗೋಡು 5 ಮಂದಿ ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 15,230 ಮಾದರಿಗಳನ್ನು ಪರೀಕ್ಷಿಸಲಾಗಿತ್ತು.
ಕಳೆದ 24 ಗಂಟೆಗಳಲ್ಲಿ ಕೋವಿಡ್ ನಿಂದ ಓರ್ವ ಮೃತನಾಗಿದ್ದಾನೆ. ಅಲ್ಲದೆ ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 8 ಸಾವುಗಳು ಮತ್ತು ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 65 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 68,066ಕ್ಕೆ ಏರಿಕೆಯಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 472 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 60, ಕೊಲ್ಲಂ 14, ಪತ್ತನಂತಿಟ್ಟ 12, ಆಲಪ್ಪುಳ 16, ಕೊಟ್ಟಾಯಂ 80, ಇಡುಕ್ಕಿ 115, ಎರ್ನಾಕುಳಂ 65, ತ್ರಿಶೂರ್ 52, ಪಾಲಕ್ಕಾಡ್ 3, ಮಲಪ್ಪುರಂ 18, ಕೋಝಿಕ್ಕೋಡ್ 1, ವಯನಾಡ್ 17, ಕಣ್ಣೂರು 10 ಮತ್ತು ಕಾಸರಗೋಡು 9 ಮಂದಿಗಳು ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 2836 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.