ಮುಳ್ಳೇರಿಯ: ಕಾಞಂಗಾಡು ಸದ್ಗುರು ಶ್ರೀ ತ್ಯಾಗಬ್ರಹ್ಮ ಸಂಗೀತ ಸಭಾದ 34ನೇ ಶ್ರೀ ತ್ಯಾಗರಾಜ ಪುರಂದರದಾಸ ಸಂಗೀತ ಆರಾಧನೆ ಕಾಞಂಗಾಡು ಶ್ರೀ ರಾಜರಾಜೇಶ್ವರಿ ಸಿದ್ಧಿಗಣೇಶ ಕ್ಷೇತ್ರದಲ್ಲಿ ಜರಗಿತು.
ಮೂರು ದಿನಗಳ ಸಮಾರಂಭವನ್ನು ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ದೀಪಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಂಗವಾಗಿ ಬೆಳಗ್ಗೆ ಮಹಾಗಣಪತಿ ಹೋಮ ನಡೆಯಿತು. ಉದ್ಘಾಟನಾ ಸಮಾರಂಭದ ನಂತರ ಎನ್.ಜೆ.ನಂದಿನಿ ತಿರುವನಂತಪುರಂ ಅವರಿಂದ ಸಂಗೀತ ಕಚೇರಿ ಜರಗಿತು. ವಯಲಿನ್‍ನಲ್ಲಿ ಗೋಕುಲ್ ಅಲಂಕೋಡ್, ಮೃದಂಗದಲ್ಲಿ ಬಾಲಕೃಷ್ಣ ಕಾಮತ್ ಕೊಚ್ಚಿ, ಘಟಂನಲ್ಲಿ ಕುರಿಚ್ಚಿತ್ತಾನಂ ಅನಂತಕೃಷ್ಣನ್ ಹಾಗೂ ಮೋರ್ಸಿಂಗ್‍ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ ಜೊತೆಗೂಡಿದರು. ಜಿಲ್ಲೆಯ ಸಂಗೀತಾಭಿಮಾನಿಗಳು, ಕಲಾವಿದರು ಪಾಲ್ಗೊಂಡಿದ್ದರು.