ತಿರುವನಂತಪುರಂ: ರಾಜ್ಯದಲ್ಲಿ ಇಂದು 353 ಮಂದಿ ಜನರಿಗೆ ಕೊರೊನಾ ದೃಢಪಟ್ಟಿದೆ. ಎರ್ನಾಕುಳಂ 95, ತಿರುವನಂತಪುರ 68, ಕೋಝಿಕ್ಕೋಡ್ 33, ಕೊಟ್ಟಾಯಂ 29, ತ್ರಿಶೂರ್ 24, ಕೊಲ್ಲಂ 23, ಇಡುಕ್ಕಿ 19, ಪತ್ತನಂತಿಟ್ಟ 16, ಆಲಪ್ಪುಳ 12, ಪಾಲಕ್ಕಾಡ್ 9, ಮಲಪ್ಪುರಂ 9, ಕಣ್ಣೂರು 9, ವಯನಾಡು 7, ಕಾಸರಗೋಡು 2 ಎಂಬಂತೆ ಸೋಂಕು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 16,614 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯಾವುದೇ ಕೊರೊನಾ ಸಾವು ದೃಢಪಟ್ಟಿಲ್ಲ. ಜತೆಗೆ, ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ ಹಿಂದಿನ ದಿನಗಳಲ್ಲಿ 3 ಸಾವುಗಳು ವರದಿಯಾಗಿವೆ ಮತ್ತು ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ ನಂತರ 72 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 68,339ಕ್ಕೆ ಏರಿಕೆಯಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 325 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 46, ಕೊಲ್ಲಂ 16, ಪತ್ತನಂತಿಟ್ಟ 29, ಆಲಪ್ಪುಳ 10, ಕೊಟ್ಟಾಯಂ 43, ಇಡುಕ್ಕಿ 19, ಎರ್ನಾಕುಳಂ 75, ತ್ರಿಶೂರ್ 21, ಪಾಲಕ್ಕಾಡ್ 2, ಮಲಪ್ಪುರಂ 11, ಕೋಝಿಕ್ಕೋಡ್ 31, ವಯನಾಡ್ 9, ಕಣ್ಣೂರಿನಲ್ಲಿ 8, ಕಾಸರಗೋಡಿನಲ್ಲಿ 8 ಎಂಬಂತೆ ಗುಣಮುಖರಾಗಿದ್ದಾರೆ. 2315 ಮಂದಿಗೆ ರೋಗ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದಾರೆ.