ತಿರುವನಂತಪುರ: ರಾಜ್ಯದಲ್ಲಿ ಇಂದು 354 ಮಂದಿಗೆ ಕೊರೊನಾ ದೃಢಪಟ್ಟಿದೆ. ಎರ್ನಾಕುಳಂ 94, ತಿರುವನಂತಪುರ 79, ಕೊಟ್ಟಾಯಂ 31, ಪತ್ತನಂತಿಟ್ಟ 30, ಕೋಝಿಕ್ಕೋಡ್ 30, ತ್ರಿಶೂರ್ 25, ಕಣ್ಣೂರು 15, ಕೊಲ್ಲಂ 14, ಇಡುಕ್ಕಿ 10, ಪಾಲಕ್ಕಾಡ್ 10, ಮಲಪ್ಪುರ 8, ಆಲಪ್ಪುಳ 7 ವಯನಾಡು 1, ಕಾಸರಗೋಡು 0 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 17,360 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಕರೋನಾದಿಂದ ಯಾವುದೇ ಸಾವುಗಳು ದೃಢಪಟ್ಟಿಲ್ಲ. ಜತೆಗೆ, ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ ಹಿಂದಿನ ದಿನಗಳಲ್ಲಿ 3 ಸಾವುಗಳು ವರದಿಯಾಗಿವೆ ಮತ್ತು ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ ನಂತರ 64 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 68,196ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಈವರೆಗೆ ಕೋವಿಡ್ ದೃಢಪಟ್ಟು ಚಿಕಿತ್ಸೆಯಲ್ಲಿದ್ದವರ ಪೈಕಿ ಇಂದು 282 ಮಂದಿ ಗುಣಮುಖರಾಗಿದ್ದಾರೆ. ತಿರುವನಂತಪುರ 39, ಕೊಲ್ಲಂ 13, ಪತ್ತನಂತಿಟ್ಟ 5, ಆಲಪ್ಪುಳ 13, ಕೊಟ್ಟಾಯಂ 20, ಇಡುಕ್ಕಿ 6, ಎರ್ನಾಕುಳಂ 87, ತ್ರಿಶೂರ್ 54, ಪಾಲಕ್ಕಾಡ್ 3, ಮಲಪ್ಪುರಂ 7, ಕೋಝಿಕ್ಕೋಡ್ 25, ವಯನಾಡ್ 6, ಕಣ್ಣೂರು 4 ಮತ್ತು ಕಾಸರಗೋಡು 0 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 2507 ಮಂದಿಗೆ ಸೋಂಕು ತಗುಲಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.