HEALTH TIPS

ಟ್ವಿಟರ್ ಖರೀದಿ ಎಫೆಕ್ಟ್: ಟೆಸ್ಲಾದ 3.99 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾರಾಟ ಮಾಡಿದ ಎಲಾನ್ ಮಸ್ಕ್

               ವಾಷಿಂಗ್ಟನ್: ಇತ್ತೀಚೆಗೆ ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಅನ್ನು ಖರೀದಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ತಮ್ಮ ಟೆಸ್ಲಾ ಕಾರು ತಯಾರಿಕಾ ಸಂಸ್ಥೆಯ ಷೇರು ಮಾರಾಟ ಮಾಡಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

            ಎಲೆಕ್ಟ್ರಿಕ್ ಕಾರು ತಯಾರಿಕ ಸಂಸ್ಥೆ ಟೆಸ್ಲಾ ಖ್ಯಾತಿಯ ಎಲಾನ್ ಮಸ್ಕ್, ಟೆಸ್ಲಾದ 44 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಷೇರುಗಳ ಮಾರುಕಟ್ಟೆ ಮೌಲ್ಯ 3.99 ಬಿಲಿಯನ್ ಡಾಲರ್ ಅಂದರೆ ಅಂದಾಜು 30,536.79 ಕೋಟಿ ರೂ ಎಂದು ಹೇಳಲಾಗಿದೆ.

               ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಕಳೆದ ವಾರ 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ)ಗೆ ಖರೀದಿಸಿದ್ದ ಎಲಾನ್ ಮಸ್ಕ್ ಅವರಿಗೆ ಟೆಸ್ಲಾ ಷೇರು ಮಾರಾಟದಿಂದ ಹಣಕಾಸಿನ ನೆರವು ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಗುರುವಾರ ಟೆಸ್ಲಾದ ಷೇರು ಮಾರಾಟದ ಬಳಿಕ ಮುಂದೆ ಷೇರು ಮಾರಾಟ ಮಾಡುವ ಚಿಂತನೆ ಇಲ್ಲ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. 

             ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ಬಳಿಕ ಟೆಸ್ಲಾ ಷೇರಿನ ಮೌಲ್ಯ ಶೇ.12ರಷ್ಟು ಇಳಿಕೆ ಕಂಡುಬಂದಿತ್ತು.



    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    Qries