ಭುವನೇಶ್ವರ: ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದು ನಿಜವಾಗಿದೆ. ಯಾವ ವಯಸ್ಸಿನಲ್ಲಾದರೂ ಶಿಕ್ಷಣ ಕಲಿಯಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ.
40 ವರ್ಷದ ಬಳಿಕ 10ನೇ ತರಗತಿ ಪರೀಕ್ಷೆ ಬರೆದ ಶಾಸಕ!
0
ಏಪ್ರಿಲ್ 30, 2022
Tags
ಭುವನೇಶ್ವರ: ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದು ನಿಜವಾಗಿದೆ. ಯಾವ ವಯಸ್ಸಿನಲ್ಲಾದರೂ ಶಿಕ್ಷಣ ಕಲಿಯಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ.
ಶಾಲೆ ಬಿಟ್ಟು ಸತತ ನಲವತ್ತು ವರ್ಷಗಳ ಬಳಿಕ 58 ವರ್ಷದ ಶಾಸಕ ಈಗ 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ.
ತಮ್ಮ ಕುಟುಂಬದ ಸಮಸ್ಯೆಯಿಂದಾಗಿ 10ನೇ ತರಗತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದೆ. 50ವರ್ಷವಾದರೂ ಪರೀಕ್ಷೆ ಬರೆಯಬಹುದು ಎಂದು ತಿಳಿದು ಈಗ ಪರೀಕ್ಷೆ ಬರೆಯಲು ಬಂದಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಕನ್ಹಾರ್ ಜತೆಗೆ ಸರ್ಪಂಚ್ ಆಗಿರುವ ಅವರ ಸ್ನೇಹಿತ ಕೂಡ 10ನೇ ತರಗಿತಿ ಪರೀಕ್ಷೆ ಬರೆದಿದ್ದಾರೆ.
10ನೇ ತರಗತಿಯಲ್ಲಿ ಅನುತ್ತೀರ್ಣರಾದ ಉಳಿದ 63 ವಿದ್ಯಾರ್ಥಿಗಳೊಂದಿಗೆ ಶಾಸಕನಾಗಿದ್ದರೂ ಸಾಮಾನ್ಯರಾಗಿಯೇ ಪರೀಕ್ಷೆ ಬರೆದು ಇತರರಿಗೆ ಮಾದರಿಯಾಗಿದ್ದಾರೆ.