ನವದೆಹಲಿ: ರಷ್ಯಾ ಭಾರತಕ್ಕೆ ಎಸ್-400 ಕ್ಷಿಪಣಿ ವ್ಯವಸ್ಥೆಯ ಎರಡನೇ ಯುನಿಟ್ ಪೂರೈಕೆಯನ್ನು ಪ್ರಾರಂಭಿಸಿದೆ. ಉಕ್ರೇನ್-ರಷ್ಯಾ ಕದನದ ಹಿನ್ನೆಲೆಯಲ್ಲಿ ನ್ಯಾಟೋ ರಾಷ್ಟ್ರಗಳು ವಿಧಿಸಿರುವ ನಡುವೆಯೇ ಭಾರತಕ್ಕೆ ಎಸ್-400 ಕ್ಷಿಪಣಿ ವ್ಯವಸ್ಥೆ ಆಮದಾಗುತ್ತಿದೆ.
ಎಸ್-400 ಕ್ಷಿಪಣಿ ವ್ಯವಸ್ಥೆಯೊಂದಿಗೆ ಅದಕ್ಕೆ ಅಗತ್ಯವಿರುವ ವೈಮಾನಿಕ ಹಾಗೂ ಕಡಲ ಕಾಂಪೊನೆಂಟ್ ಗಳನ್ನೂ ಪೂರೈಕೆ ಮಾಡಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಎಸ್-400 ಮಿಸೈಲ್ಸ್ ನ ಮೊದಲ ಯುನಿಟ್ ಡಿಸೆಂಬರ್ 2021 ರಲ್ಲಿ ಪೂರೈಕೆ ಮಾಡಲಾಗಿತ್ತು. ಅಮೆರಿಕ ಏನು ಹೇಳುತ್ತದೆಯೋ ಅದನ್ನು ಲೆಕ್ಕಿಸದೇ ಈ ವ್ಯವಸ್ಥೆಯನ್ನು ಭಾರತ ತರಿಸಿಕೊಳ್ಳಬೇಕಿತ್ತು ಅದು ಆಗಿದೆ ಎಂದು ರಕ್ಷಣಾ ವಿಶ್ಲೇಷಕ ಮೇಜರ್ ಜನರಲ್ (ನಿವೃತ್ತ) ಎಸ್ ಬಿ ಆಸ್ಥಾನ ಹೇಳಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ವಿರುದ್ಧ ಮಾತನಾಡದ ಭಾರತದ ಮೇಲೆ ಅಮೆರಿಕ ಒತ್ತಡ ಹೇರಲು ಯತ್ನಿಸಿತ್ತು. ಆದರೂ ಭಾರತ ಜಗ್ಗಿರಲಿಲ್ಲ.