ತಿರುವನಂತಪುರ: ರಾಜ್ಯದಲ್ಲಿ ಇಂದು 418 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 95, ತಿರುವನಂತಪುರ 81, ಕೊಟ್ಟಾಯಂ 44, ತ್ರಿಶೂರ್ 34, ಕೋಝಿಕ್ಕೋಡ್ 32, ಪತ್ತನಂತಿಟ್ಟ 29, ಆಲಪ್ಪುಳ 22, ಕೊಲ್ಲಂ 18, ಇಡುಕ್ಕಿ 15, ಮಲಪ್ಪುರಂ 15, ಕಣ್ಣೂರು 13, ಪಾಲಕ್ಕಾಡ್ 10, ವಯನಾಡ್ 8, ಕಾಸರಗೋಡು 2 ಎಂಬಂತೆ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಗಳಲ್ಲಿ 15,864 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಇತ್ತೀಚೆಗೆ ದೃಢಪಡಿಸಿದ 3 ಸಾವುಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳ ಮೇಲೆ 76 ಸಾವುಗಳು ಸೇರಿದಂತೆ ಒಟ್ಟು 79 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 67,992ಕ್ಕೆ ಏರಿಕೆಯಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 454 ರೋಗಿಗಳು ಗುಣಮುಖರಾಗಿದ್ದಾರೆ. ತಿರುವನಂತಪುರ 58, ಕೊಲ್ಲಂ 18, ಪತ್ತನಂತಿಟ್ಟ 0, ಆಲಪ್ಪುಳ 17, ಕೊಟ್ಟಾಯಂ 70, ಇಡುಕ್ಕಿ 42, ಎರ್ನಾಕುಳಂ 113, ತ್ರಿಶೂರ್ 51, ಪಾಲಕ್ಕಾಡ್ 3, ಮಲಪ್ಪುರಂ 15, ಕೋಝಿಕ್ಕೋಡ್ 44, ವಯನಾಡ್ 11, ಕಣ್ಣೂರು 12 ಮತ್ತು ಕಾಸರಗೋಡು ೦ ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 3051 ಮಂದಿ ಜನರಿಗೆ ರೋಗ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.