ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ 43ನೇ ವಾರ್ಷಿಕೋತ್ಸವವು ಎಪ್ರಿಲ್ 29ರಂದು ವೇದಮೂರ್ತಿ ಬಳ್ಳಪದವು ಮಾಧವ ಉಪಾಧ್ಯಾಯರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಅಂದು ಬೆಳಗ್ಗೆ ಶ್ರೀಮಂದಿರ ಅಧ್ಯಕ್ಷ ಬಾಬುಮಾಸ್ತರ್ ಅಗಲ್ಪಾಡಿ ಧ್ವಜಾರೋಹಣಗೈದು ಚಾಲನೆ ನೀಡುವರು. 6.30ಕ್ಕೆ ಶುದ್ಧಿಕಲಶ ಹಾಗೂ ಗಣಪತಿ ಹವನ ಜರಗಲಿದೆ. ಬೆಳಗ್ಗೆ 8.ರಿಂದ 9. ಶ್ರೀ ಗೋಪಾಲಕೃಷ್ಣ ಭಜನಾ ಸಂಘ ಅಗಲ್ಪಾಡಿ, ಜಯನಗರ ತಂಡದಿಂದ ಭಜನೆ, 8.30ಕ್ಕೆ ಪೂಜೆ, 9.30 ಚಪ್ಪರ ಮದುವೆ, 9.45 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 10. ರಿಂದ ಧಾರ್ಮಿಕ ಸಭೆ ಜರಗಲಿರುವುದು. ಕ್ಯಾ. ಸುಧಾನಂದ ಮಾವಿನಕಟ್ಟೆ ಪೆರುವಾಜೆ ಹಾಗೂ ರಾಜ್ಯಪ್ರಶಸ್ತಿ ವಿಜೇತೆ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಧಾರ್ಮಿಕ ಭಾಷಣ ಮಾಡಲಿರುವರು. ಮಂದಿರದ ಅಧ್ಯಕ್ಷ ಬಾಬುಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಲಿರುವರು. ಸುಧಾಮ ಮಾಸ್ತರ್ ಅಗಲ್ಪಾಡಿ, ವಸಂತಿ ಟೀಚರ್ ಅಗಲ್ಪಾಡಿ ಉಪಸ್ಥಿತರಿರುವರು. ಸಾಮಾಜಿಕ ಕಾರ್ಯಕರ್ತ ಪ್ರೊ. ಎ.ಶ್ರೀನಾಥ್ ಕೊಲ್ಲಂಗಾನ, ಮುಖ್ಯಮಂತ್ರಿ ಸ್ವರ್ಣ ಪದಕ ವಿಜೇತ ಪೊಲೀಸ್ ಅಧಿಕಾರಿ ಕುಶಲ ಮಣಿಯಾಣಿ ಸುರತ್ಕಲ್ ಅವರಿಗೆ ಸನ್ಮಾನ ನಡೆಯಲಿದೆ. ಪ್ರತಿಭಾ ಪುರಸ್ಕಾರ, ಮಧ್ಯಾಹ್ನ ತುಲಾಭಾರ ಸೇವೆ, ಯುವ ವಿಭಾಗದವರಿಂದ ಪಾತ್ರೆ ಸಮರ್ಪಣೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ಅಪರಾಹ್ನ 2.30ರಿಂದ 3.30ರ ತನಕ ಕುಂಟಾರು ಶ್ರೀಕೃಷ್ಣ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ, 3.30.ರಿಂದ ಯಕ್ಷವಿಹಾರಿ ಬದಿಯಡ್ಕ ಇವರಿಂದ ಗರುಡ ಗರ್ವಭಂಗ ಯಕ್ಷಗಾನ ತಾಳಮದ್ದಳೆ, ಸಂಜೆ 5.30ರಿಂದ ಮುರಳಿಮಾಧವ ಪೆರಿಂಜೆ ಇವರ ಶಿಷ್ಯವೃಂದದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ, ರಾತ್ರಿ 7ರಿಂದ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷರತ್ನ, ಕಲಾರತ್ನ ಬಿರುದುಗಳಿಂದ ಪುರಸ್ಕøತ ರಾಘವ ಬಲ್ಲಾಳ್ ಕಾರಡ್ಕ ಇವರ ಶಿಷ್ಯವೃಂದದವರಿಂದ ಪೂರ್ವ ರಂಗ ಗಾನವೈಭÀವ, 9 ಗಂಟೆಯಿಂದ ಸ್ಥಳೀಯ ಮಕ್ಕಳಿಂದ ನೃತ್ಯಸಂಧ್ಯಾ -2022, 10 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಧ್ವಜಾವರೋಹಣದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.