ಪಾಲಕ್ಕಾಡ್: ಆರ್‌ಎಸ್‌ಎಸ್ ನ ಮಾಜಿ ಶಾರೀರಿಕ್ ಪ್ರಮುಖ್ ಶ್ರೀನಿವಾಸ್ ಕೃಷ್ಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಕಸ್ಟಡಿಗೆ ಪಡೆಯಲಾಗಿದರ. ಹಂತಕರಿಗೆ ವಾಹನ ಒದಗಿಸಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಸಂಚು ರೂಪಿಸಿ ರಕ್ಷಣೆ ನೀಡಿದವರು ಸೇರಿದಂತೆ 12 ಮಂದಿ ಆರೋಪಿಗಳಾಗಿರುವ ಸೂಚನೆಗಳಿವೆ.
ಕೊಲೆಗಾರ ಗುಂಪಿನ ನಾಲ್ವರು ಸದಸ್ಯರ ವಿವರಗಳನ್ನು ನಿನ್ನೆ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಪಟ್ಟಾಂಬಿ ನಿವಾಸಿಗಳಾದ ಉಮ್ಮರ್ ಮತ್ತು ಅಬ್ದುಲ್ ಖಾದಿರ್, ಶಂಖುವಾರತ್ ನಿವಾಸಿಗಳಾದ ಅಬ್ದುಲ್ ರೆಹಮಾನ್ ಮತ್ತು ಫಿರೋಜ್ ಎಂದು ಗುರುತಿಸಲಾಗಿದೆ. ಸಿಸಿಟಿವಿ ಫೂಟೇಜ್ ಮತ್ತು ಫೋನ್ ಮಾಹಿತಿಯಿಂದ ಆರೋಪಿಗಳನ್ನು ಗುರುತಿಸಲಾಗಿದೆ.
ಜೊತೆಗೆ 83 ಮಂದಿ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ಇವರಿಂದ ಇಪ್ಪತ್ತೈದು ಮೊಬೈಲ್ ಫೋನ್ ಗಳನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರು ಅಪರಾಧ ಹಿನ್ನೆಲೆಯುಳ್ಳ ಎಸ್‌ಡಿಪಿಐ ಕಾರ್ಯಕರ್ತರು.
ಕೊಲೆ ಆರೋಪಿಗಳ ಹೆಚ್ಚಿನ ದೃಶ್ಯಾವಳಿ ದೃಶ್ಯ ಮಾಧ್ಯಮಗಳಿಗೆ ಸಿಕ್ಕಿದೆ. ದಾಳಿಕೋರರು ಪಾಲಕ್ಕಾಡ್‌ನ ವಲಿಯಂಗಾಡಿ ಮಾರುಕಟ್ಟೆಯ ಮುಂಭಾಗದಲ್ಲಿ ಮೂರು ಬೈಕ್‌ಗಳಲ್ಲಿ ಬರುತ್ತಿರುವ ದೃಶ್ಯಾವಳಿ ಸಿಕ್ಕಿದೆ. ದಾಳಿಕೋರರ ವಾಹನಗಳ ಸಿಸಿಟಿವಿ ದೃಶ್ಯಾವಳಿಗಳು ನಿಖರವಾಗಿ ದಾಖಲಾಗಿವೆ