ನವದೆಹಲಿ: ಮುಸ್ಲಿಂ ಧರ್ಮದವರು ಭಾರತದ ಪ್ರಧಾನಿಯಾದರೆ 50 ಪ್ರತಿಶತ ಹಿಂದೂಗಳು ಮತಾಂತರಗೊಳ್ಳುತ್ತಾರೆ, 40 ಪ್ರತಿಶತದಷ್ಟು ಮಂದಿ ಹತ್ಯೆಯಾಗುತ್ತಾರೆ ಮತ್ತು 10 ಪ್ರತಿಶತ ದೇಶಭ್ರಷ್ಟರಾಗುತ್ತಾರೆ ಎಂದು ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ದೆಹಲಿಯಲ್ಲಿ ನಡೆದ ಹಿಂದೂ ಮಹಾಪಂಚಾಯತ್ ಅನ್ನು ಉದ್ದೇಶಿಸಿ ಮಾತನಾಡಿದ ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ್, 2029ರಲ್ಲಿ ಅಥವಾ 2034ರಲ್ಲಿ ಅಥವಾ 2039ರಲ್ಲಿ ಮಾತ್ರ ಮುಸ್ಲಿಂ ಪ್ರಧಾನಿಯಾಗುತ್ತಾರೆ. ಒಮ್ಮೆ ಮುಸಲ್ಮಾನನೊಬ್ಬ ಪ್ರಧಾನಿಯಾದರೆ ಶೇಕಡಾ 50 ರಷ್ಟು ಹಿಂದೂಗಳು ಮತಾಂತರಗೊಳ್ಳುತ್ತಾರೆ, ಶೇಕಡಾ 40 ರಷ್ಟು ಜನರು ಕೊಲ್ಲಲ್ಪಡುತ್ತಾರೆ ಮತ್ತು ಉಳಿದ ಶೇಕಡಾ 10 ರಷ್ಟು ಜನರು ಮುಂದಿನ 20 ವರ್ಷಗಳಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಅಥವಾ ಇತರ ದೇಶಗಳಲ್ಲಿ ವಾಸಿಸುತ್ತಾರೆ. ಇದು ಮುಂದಿನ ಹಿಂದೂಗಳ ಭವಿಷ್ಯ. ನೀವು ಇದನ್ನು ತಪ್ಪಿಸಲು ಬಯಸಿದರೆ, ನಂತರ ಮನುಷ್ಯನಾಗಿ ಮತ್ತು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಅವರ ವಿವಾದಾತ್ಮಕ ಭಾಷಣದ ನಂತರ, ಸೆಕ್ಷನ್ 153ಂ ಅಡಿಯಲ್ಲಿ ಎಫ್‌ಐಆರ್ [ಧರ್ಮ, ಜನಾಂಗ, ಜನ್ಮ ಸ್ಥಳ, ನಿವಾಸ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು…] ಮತ್ತು ಭಾರತೀಯ ದಂಡ ಸಂಹಿತೆಯ 188 ಅನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ.
ಇದಕ್ಕೂ ಮೊದಲು, 2021 ರ ಡಿಸೆಂಬರ್‌ನಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಯತಿ ನರಸಿಂಹಾನಂದ ಅವರನ್ನು ಬಂಧಿಸಲಾಯಿತು. ನಂತರ ಅವರಿಗೆ ಜಾಮೀನು ನೀಡಲಾಯಿತು.
3 ಎಫ್‌ಐಆರ್
ಭಾನುವಾರ ಹಿಂದೂ ಮಹಾಪಂಚಾಯತ್‌ಗೆ ಸಂಬಂಧಿಸಿದಂತೆ ಮೂರು ಎಫ್‌ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಒಂದು ಎಫ್‌ಐಆರ್ ದ್ವೇಷ ಭಾಷಣದ ಆರೋಪಕ್ಕೆ ಸಂಬಂಧಿಸಿದ್ದು ಮತ್ತು ಇನ್ನೆರಡು ಪತ್ರಕರ್ತರು ನೀಡಿದ ದೂರುಗಳ ಮೇಲೆ ದಾಖಲಾಗಿವೆ. ಕಾರ್ಯಕ್ರಮದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪತ್ರಕರ್ತರು ಹೇಳಿದ್ದಾರೆ.