ನವದೆಹಲಿ: ಸರ್ಕಾರ ಜೂನ್ ತಿಂಗಳಲ್ಲಿ 5ಜಿ ತರಂಗಾಂತರ ಹರಾಜು ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಟೆಲಿಕಾಮ್ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ನಿರೀಕ್ಷಿತ ಸಮಯಕ್ಕೆ ತಕ್ಕೆಂತೆ ಕೆಲಸ ನಡೆಯುತ್ತಿದೆ. ತರಂಗಾಂತರದ ಬೆಲೆಗಳ ಬಗ್ಗೆ ಕ್ಷೇತ್ರದಲ್ಲಿರುವ ಗೊಂದಲ, ಆತಂಕಗಳನ್ನು ದೂರ ಮಾಡುವ ಪ್ರಕ್ರಿಯೆಗಳು ಪ್ರಾರಂಭವಾಗಿವೆ.
30 ವರ್ಷಗಳಿಂದ ಹಂಚಿಕೆ ಮಾಡಲಾಗಿರುವ ವಿವಿಧ ರೇಡಿಯೋ ತರಂಗಗಳಿಗೆ 7.5 ಲಕ್ಷ ಕೋಟಿಗಳ ಮೂಲ ಬೆಲೆಯೊಂದಿಗೆ ಟ್ರಾಯ್ ಮೆಗಾ ಹರಾಜನ್ನು ನಡೆಸಲಿದೆ. ಹರಾಜು ಪ್ರಕ್ರಿಯೆ ನಿಗದಿತ, ನಿರೀಕ್ಷಿತ ಕಾಲದಲ್ಲೇ ನಡೆಯಲಿದೆ ಎಂದು ವೈಷ್ಣವ್ ತಿಳಿಸಿದ್ದಾರೆ.
ಟ್ರಾಯ್ ಶಿಫಾರಸುಗಳ ಬಗ್ಗೆ ಡಿಜಿಟಲ್ ಕಮ್ಯುನಿಕೇಷನ್ ಆಯೋಗ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.