ನವದೆಹಲಿ: ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ 4ನೇ ಅಲೆಯ ಭೀತಿ ವ್ಯಾಪಕವಾಗಿರುವಂತೆಯೇ ಇತ್ತ 6ರಿಂದ 12 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಿಕೆಗೆ ಕೇಂದ್ರ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ಅನುಮೋದನೆ ನೀಡಿದೆ.
ಕಳೆದ ಕೆಲವು ತಿಂಗಳಗಳಿಂದಲೇ 6ರಿಂದ 12 ವರ್ಷದ ಮಕ್ಕಳಿಗೆ ತನ್ನ ಕೋವ್ಯಾಕ್ಸಿನ್ ಲಸಿಕೆ ನೀಡಿಕೆಗೆ ಅನುಮೋದನೆ ಪಡೆಯಲು ಭಾರತ್ ಬಯೋಟೆಕ್ ಸಂಸ್ಥೆ ಪ್ರಯತ್ನಿಸುತ್ತಿತ್ತು. ಆದರೆ ಈ ಕುರಿತ ಸೂಕ್ತ ವರದಿ ಇಲ್ಲದೆ ತಾನು ಅನುಮೋದನೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿತ್ತು. ಆದರೆ ಇದೀಗ ಡಿಸಿಜಿಐ ಕೋವ್ಯಾಕ್ಸಿನ್ ಲಸಿಕೆಯನ್ನು 6 ರಿಂದ 12 ವರ್ಷಗಳ ಮಕ್ಕಳಿಗೆ ನೀಡುವುದಕ್ಕೆ ಅನುಮೋದನೆ ನೀಡಿದೆ.
ಮೊದಲ ಎರಡು ತಿಂಗಳ ಕಾಲ ಪ್ರತಿ 15 ದಿನಗಳಿಗೊಮ್ಮೆ ಸರಿಯಾದ ವಿಶ್ಲೇಷಣೆಯೊಂದಿಗೆ ಪ್ರತಿಕೂಲ ಘಟನೆಗಳ ದತ್ತಾಂಶ ಸೇರಿದಂತೆ ಸುರಕ್ಷತಾ ದತ್ತಾಂಶವನ್ನು ಸಲ್ಲಿಸಲು ಲಸಿಕೆ ತಯಾರಕರಿಗೆ DCGI ಈ ಹಿಂದೆ ನಿರ್ದೇಶನ ನೀಡಿತ್ತು. ಎರಡು ತಿಂಗಳ ನಂತರ, ಭಾರತ್ ಬಯೋಟೆಕ್ ಸಂಸ್ಥೆ 5 ತಿಂಗಳವರೆಗೆ ಮಾಸಿಕ ದತ್ತಾಂಶ ಸಲ್ಲಿಸಿತ್ತು. ಈ ದತ್ತಾಂಶ ಪರಿಶೀಲನೆ ಬಳಿಕ ಡಿಸಿಜಿಐ ಲಸಿಕೆ ನೀಡಿಕೆಗೆ ಅನುಮೋದನೆ ನೀಡಿದೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಇದೇ ಸಂದರ್ಭದಲ್ಲಿ ಡಿಸಿಜಿಐ 5-12 ವರ್ಷ ವಯಸ್ಸಿನ ಮಕ್ಕಳಿಗೆ ಕಾರ್ಬೆವಾಕ್ಸ್‌ಗೆ ತುರ್ತು ಬಳಕೆಯ ಅಧಿಕಾರವನ್ನು ಸಹ ನೀಡಿದ್ದು, ಇದಲ್ಲದೆ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ Zycov D (ಜೈಡಸ್ ಕ್ಯಾಡಿಲಾ ಲಸಿಕೆ) ಗೆ ತುರ್ತು ಬಳಕೆಯ ಅಧಿಕಾರವನ್ನು ನೀಡಿದೆ.
6-12 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ನಿರ್ಬಂಧಿತ ತುರ್ತು ಬಳಕೆಯ ಅಧಿಕಾರವನ್ನು ನೀಡಿದ್ದು, ಸುರಕ್ಷತಾ ಡೇಟಾವನ್ನು ಸಲ್ಲಿಸುವಂತೆ ಕೇಳಿದೆ. ಪ್ರತಿಕೂಲ ಪರಿಣಾಮಗಳ ದತ್ತಾಂಶವನ್ನು ಒಳಗೊಂಡಂತೆ ಸುರಕ್ಷತಾ ದತ್ತಾಂಶವನ್ನು ಸಲ್ಲಿಸಲು ಭಾರತ್ ಬಯೋಟೆಕ್ ಸೂಚಿಸಿದ್ದು, ಮೊದಲ ಎರಡು ತಿಂಗಳು ಪ್ರತಿ 15 ದಿನಗಳಿಗೊಮ್ಮೆ ಮತ್ತು ನಂತರ ಐದು ತಿಂಗಳವರೆಗೆ ತಿಂಗಳ ದತ್ತಾಂಶವನ್ನು ನೀಡುವಂತೆ ಹೇಳಿದೆ.