HEALTH TIPS

60 ಅಡಿ ಉದ್ದದ, 500 ಟನ್‌ ತೂಕದ ಉಕ್ಕಿನ ಸೇತುವೆಯನ್ನು ಎಲ್ಲರ ಕಣ್ಣುದುರೇ ಕದ್ದರು!

             ಸಸರಾಮ್‌: ಬಿಹಾರದ ಸಸರಾಮ್ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಗುಂಪೊಂದು 60 ಅಡಿ ಉದ್ದದ ಉಕ್ಕಿನ ಸೇತುವೆಯನ್ನು ಕೆಡವಿ ಕದ್ದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

         500 ಟನ್ ತೂಕದ ಸೇತುವೆಯನ್ನು 1972 ರಲ್ಲಿ ನಸ್ರಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮಿಯಾವರ್ ಗ್ರಾಮದಲ್ಲಿ ಅರ್ರಾ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿತ್ತು.

        ನೀರಾವರಿ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಗುಂಪೊಂದು ಮೂರು ದಿನಗಳ ಕಾಲ ಗ್ಯಾಸ್ ಕಟರ್ ಮತ್ತು ಮಣ್ಣು ತೆಗೆಯುವ ಯಂತ್ರಗಳ ಸಹಾಯದಿಂದ ಶಿಥಿಲ ಸೇತುವೆಯನ್ನು ಕೆಡವಿ, ಕದ್ದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

                ಏನಾಗುತ್ತಿದೆ ಎಂಬುದನ್ನು ಅರಿತು ಸ್ಥಳೀಯರು ಪೊಲೀಸರಿಗೆ ತಿಳಿಸುವಷ್ಟರಲ್ಲಿ ಅವರು ಕಬ್ಬಿಣದೊಂದಿಗೆ ಪರಾರಿಯಾಗಿದ್ದಾರೆ ಎಂದು ನಸ್ರಿಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸುಭಾಷ್ ಕುಮಾರ್ ಹೇಳಿದ್ದಾರೆ.

           ಸೇತುವೆ ಕಳ್ಳತನದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸ್ಕ್ರ್ಯಾಪ್‌ ಡೀಲರ್‌ಗಳಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು.

             'ಸೇತುವೆ ತುಂಬಾ ಹಳೆಯದಾಗಿತ್ತು. ಅದನ್ನು ಅಪಾಯಕಾರಿ ಎಂದೂ ಘೋಷಿಸಲಾಗಿತ್ತು. ಹಳೆಯದಕ್ಕೆ ಹೊಂದಿಕೊಂಡಂತೆ ಹೊಸ ಕಾಂಕ್ರೀಟ್ ಸೇತುವೆಯನ್ನು ನಿರ್ಮಿಸಲಾಗಿತ್ತು. ಅದನ್ನು ಪ್ರಸ್ತುತ ಸ್ಥಳೀಯರು ಬಳಸುತ್ತಿದ್ದಾರೆ' ಎಂದು ಅಮಿಯಾವರ್ ಗ್ರಾಮದ ನಿವಾಸಿ ಮಂಟು ಸಿಂಗ್ ಹೇಳಿದರು.

             ಘಟನೆಯ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಕಳ್ಳರು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ನಾಯಕರಿಂದ ಪ್ರೇರಣೆ ಪಡೆದಿದ್ದಾರೆ ಎಂದು ಗೇಲಿ ಮಾಡಿದ್ದಾರೆ.

               'ಬಿಹಾರದ ಸರ್ಕಾರವನ್ನು ಬಿಜೆಪಿ ಮತ್ತು ನಿತೀಶ್ ಕುಮಾರ್ ಇಬ್ಬರೂ ಸೇರಿ ಕದಿಯಲು ಸಾಧ್ಯವಾದರೆ, ಸೇತುವೆ ಯಾವ ಲೆಕ್ಕ? ಎಂದು ಕುಹಕವಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries