HEALTH TIPS

ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಕೋವಿಶೀಲ್ಡ್ ಬೂಸ್ಟರ್ ಡೋಸ್ ಗೆ 600 ರೂ.: ಸೀರಂ ಸಂಸ್ಥೆ

           ನವದೆಹಲಿ: ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಭಾನುವಾರದಿಂದ ಎಲ್ಲಾ ವಯಸ್ಕರಿಗೆ ಕೊರೋನಾ ವೈರಸ್ ಬೂಸ್ಟರ್ ಡೋಸ್ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ಅನುಮತಿಸಿದ ಬೆನ್ನಲ್ಲೇ ಲಸಿಕೆಯ ಬೆಲೆ ಎಷ್ಟಿರಬಹುದು ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಸೀರಂ ಇನ್ ಸ್ಟಿಟ್ಯೂಟ್ ಉತ್ತರ ಕೊಟ್ಟಿದೆ.

               ಸರ್ಕಾರದ ನಿರ್ಧಾರವನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನಾವಾಲ್ಲಾ ಸ್ವಾಗತಿಸಿದ್ದಾರೆ. ಇದು ನಿರ್ಣಾಯಕ ಮತ್ತು ಸಮಯೋಚಿತ ನಿರ್ಧಾರ ಎಂದಿರುವ ಲಸಿಕೆ ಉದ್ಯಮಿ, ಹಲವಾರು ದೇಶಗಳು ಬೂಸ್ಟರ್ ಡೋಸ್ ತೆಗೆದುಕೊಳ್ಳದವರ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದರಿಂದ, ವಿದೇಶಕ್ಕೆ ಪ್ರಯಾಣಿಸಲು ಬಯಸುವ ಜನರು ಮೂರನೇ ಡೋಸ್ ಇಲ್ಲದೆ ಪ್ರಯಾಣಿಸಲು ಕಷ್ಟಪಡುತ್ತಿದ್ದಾರೆ ಎಂದು ಹೇಳಿದ್ದಾರೆ.

                 ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈಗಾಗಲೇ ಶುಲ್ಕ ಮುಕ್ತವಾಗಿ ನೀಡುತ್ತಿರುವ ಬೂಸ್ಟರ್ ಡೋಸ್ ವಯಸ್ಕರಿಗೆ ಉಚಿತವಾಗಿರುವುದಿಲ್ಲ.

                ಸೀರಂ ಸಂಸ್ಥೆಯ ಕೋವಿಶೀಲ್ಡ್ ಗೆ ಈ ಹಿಂದಿನ ತೆರಿಗೆ ದರದ ಜೊತೆಗೆ 600 ರೂಪಾಯಿ ಆಗಲಿದೆ ಎಂದು ಆದರ್ ಪೂನಾವಾಲ್ಲಾ ಅವರು ಹೇಳಿದ್ದಾರೆ.

                 ಇನ್ನೂ ಕೋವೋವ್ಯಾಕ್ಸ್ ಅನ್ನು ಬೂಸ್ಟರ್ ಡೋಸ್ ಆಗಿ ನೀಡಲು ಅನುಮತಿ ಸಿಕ್ಕಲ್ಲಿ. ಈ ಹಿಂದಿನ ತೆರಿಗೆ ದರದ ಜೊತೆಗೆ 600 ರೂಪಾಯಿಗೆ ಖಾಸಗಿ ಕ್ಲಿನಿಕ್ ಗಳಲ್ಲಿ ಲಭ್ಯವಿರಲಿದೆ ಎಂದು ಪೂನಾವಾಲಾ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries