ಶ್ರೀನಗರ: ಕಳೆದ ವರ್ಷ 2021ರ ಡಿಸೆಂಬರ್ ನಿಂದ ಮಾರ್ಚ್ ವರೆಗೆ ಸುಮಾರು 66 ಉಗ್ರರು ಗಡಿ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಹತ್ಯೆಯಾಗಿದ್ದಾರೆ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಪುಲ್ವಾಮಾದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹೊರಗಿನಿಂದ ಬಂದ ಕಾರ್ಮಿಕರು ಉಗ್ರರಿಂದ ಹತ್ಯೆಗೀಡಾಗಿದ್ದಾರೆ. ಕುಕೃತ್ಯದಲ್ಲಿ ಭಾಗಿಯಾದ ಉಗ್ರರನ್ನು ಗುರುತಿಸಲಾಗಿದ್ದು ಸದ್ಯದಲ್ಲಿಯೇ ಹತ್ಯೆ ಮಾಡುತ್ತೇವೆ. ಶೋಪಿಯಾನ್‌ನಲ್ಲಿ ದೂರದ ಹಳ್ಳಿಯೊಂದರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ದಾಳಿ ನಡೆದಿದೆ. ಉಗ್ರರ ವಿರುದ್ಧ ಕಾದಾಟದಲ್ಲಿ ನಾವು ಜಯ ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ನಸುಕಿನ ಜಾವ ಜಮ್ಮು-ಕಾಶ್ಮೀರದ ಆವಂತಿಪೊರಾದ ಟ್ರಾಲ್ ಪ್ರದೇಶದಲ್ಲಿ ಎನ್ ಕೌಂಟರ್ ನಡೆದಿದೆ. ಇದರಲ್ಲಿ ಇಬ್ಬರು ಉಗ್ರರ ಹತ್ಯೆಯಾಗಿದೆ. ಉಮರ್ ತೇಲಿ ಮತ್ತು ಸಫತ್ ಇಬ್ಬರು ಸ್ಥಳೀಯ ಭಯೋತ್ಪಾದಕರು ಶ್ರೀನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ನಾಗರಿಕ ಹತ್ಯೆಗಳು ಮತ್ತು ಇತರ ಹಲವಾರು ದುರ್ಘಟನೆಗಳನ್ನು ನಡೆಸಿದ ನಂತರ ಅವರು ಟ್ರಾಲ್‌ಗೆ ಪರಾರಿಯಾಗಿದ್ದರು. ಇಂದು ಅವರನ್ನು ಪತ್ತೆಹಚ್ಚಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಭಯೋತ್ಪಾದಕರು ಸ್ಥಳೀಯ ಉಗ್ರರನ್ನು ಮುಂದಿಟ್ಟುಕೊಂಡು ದಾಳಿ ನಡೆಸುತ್ತಾರೆ ಎಂದು ವಿಜಯ್ ಕುಮಾರ್ ಪಾಕಿಸ್ತಾನ ಭಯೋತ್ಪಾದಕರು ಜಮ್ಮು-ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಾರೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದರು.