ಉಧಮ್‌ಪುರ: ಸ್ವಾತಂತ್ರ್ಯ ಗಳಿಸಿ 75 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದ ಗ್ರಾಮ ಸದ್ದಲ್ ಗೆ ವಿದ್ಯುತ್ ದೊರೆತಿದ್ದು, ಕೊನೆಗೂ ಕತ್ತಲೆಯಿಂದ ಮುಕ್ತಿ ದೊರೆತಿದೆ.
ಕೇಂದ್ರ ಸರ್ಕಾರದ ‘ಅನ್ಟೈಡ್ ಗ್ರ್ಯಾಂಟ್ಸ್’ ಯೋಜನೆಯಡಿ ಬುಧವಾರ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದ ಗ್ರಾಮ ಸದ್ದಲ್ ವಿದ್ಯುತ್ ಪಡೆಯುವ ಮೂಲಕ ಕತ್ತಲೆಯಿಂದ ಬೆಳಕಿನತ್ತ ಬಂದಿದೆ.
ಮೊದಲು, ಈ ಹಳ್ಳಿಯಲ್ಲಿ ಕತ್ತಲೆಯ ಸಮಯದಲ್ಲಿ ಬೆಳಕಿನ ಏಕೈಕ ಮೂಲವೆಂದರೆ ಮೇಣದಬತ್ತಿಗಳು ಮತ್ತು ಎಣ್ಣೆ ದೀಪಗಳು. ಅದು ಕ್ರಮೇಣ ಅವರ ದೈನಂದಿನ ಜೀವನದ ಭಾಗವಾಯಿತು. ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬ ಬಹುದಿನಗಳ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಾಚರಣೆಯ ಯಶಸ್ಸಿಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಪಂಚಾಯತ್ ರಾಜ್ ಕಾಯ್ದೆಯ ಮೂರು ಹಂತದ ವ್ಯವಸ್ಥೆಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ. ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತ, ಉಧಮ್‌ಪುರ ಆಡಳಿತ ಮತ್ತು ವಿದ್ಯುತ್ ಇಲಾಖೆಗೆ ಮಕ್ಕಳು ಕೃತಜ್ಞತೆ ಸಲ್ಲಿಸಿದ್ದಾರೆ.
ಹೌದು ಏಕೆಂದರೆ ಸತತ ೭೫ ವರ್ಷಗಳಿಂದ ಈ ಹಳ್ಳಿಯ ಮಕ್ಕಳು ಕೇವಲ ದೀಪದ ಬೆಳಕಿನಲ್ಲಿ, ಮೇಣದ ಬತ್ತಿಯ ಬೆಳಕಿನಲ್ಲಿ ಓದಬೇಕಾಗಿತ್ತು. ಇದೀಗ ವಿದ್ಯುತ್ ಬಂದಿರುವ ಖುಷಿಯಲ್ಲಿ ವಿದ್ಯಾರ್ಥಿಗಳು ಈ ಹಿಂದೆ ನಮಗೆ ಓದು ಬೇಸರ ತರಿಸುತ್ತಿತ್ತು. ಇದೀಗ ಆ ಕೊರತೆ ನೀಗಿದೆ. ನಾವು ಖುಷಿಯಿಂದ ಓದನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.