ನವದೆಹಲಿ: ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಬಹು ಹಂತದ ಮಾರುಕಟ್ಟೆ ಯೋಜನೆ ಉತ್ತೇಜನಾ ಕಂಪನಿ (ಎಂಎಲ್‌ಎಂ) 'ಆಯಮ್‌ವೇ ಇಂಡಿಯಾ'ದ ₹757 ಕೋಟಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ತಿಳಿಸಿದ್ದಾರೆ.

ಜಪ್ತಿ ಮಾಡಿರುವ ಸ್ವತ್ತುಗಳಲ್ಲಿ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿರುವ ಭೂಮಿ ಮತ್ತು ಕಟ್ಟಡ ಸೇರಿದೆ. ಕಂಪನಿಯ ಘಟಕ, ಯಂತ್ರಗಳು, ವಾಹನಗಳು, ಬ್ಯಾಂಕ್ ಖಾತೆಗಳು ಹಾಗೂ ಸ್ಥಿರ ಠೇವಣಿಗಳೂ ಸೇರಿವೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.
ಜಪ್ತಿ ಮಾಡಲಾದ ಒಟ್ಟು ಸ್ವತ್ತಿನ ಪೈಕಿ ₹411.83 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಇದ್ದು, ಉಳಿದಂತೆ ₹345.94 ಕೋಟಿ 36 ಬ್ಯಾಂಕ್ ಖಾತೆಗಳಲ್ಲಿದ್ದ ಮೊತ್ತ ಎಂದು ಇ.ಡಿ. ತಿಳಿಸಿದೆ.
ಕಂಪನಿಯು ಬಹು-ಹಂತದ ಮಾರ್ಕೆಟಿಂಗ್ 'ಹಗರಣ'ವನ್ನು ನಡೆಸುತ್ತಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.