ಮುಂಬೈ: ಭಾರತೀಯ ನೌಕಾದಳ ಸಾಮರ್ಥ್ಯ ಮತ್ತಷ್ಟು ಹೆಚ್ಚಳವಾಗಿದ್ದು, ಐಎನ್‌ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆ ಬುಧವಾರ ಲೋಕಾರ್ಪಣೆಯಾಗಿದೆ.
ಈ ಹಿಂದೆ ಪ್ರಾಜೆಕ್ಟ್ 75ರ ಅಡಿಯಲ್ಲಿ ನಿರ್ಮಾಣವಾಗಿದ್ದ ಆರು ಫ್ರೆಂಚ್ ಸ್ಕಾರ್ಪಿನ್-ಕ್ಲಾಸ್ ಜಲಾಂತರ್ಗಾಮಿ ನೌಕೆಗಳಲ್ಲಿ ಆರನೇ ಮತ್ತು ಕೊನೆಯ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆಯನ್ನು ಮಂಗಳವಾರ ಮುಂಬೈನ ಮಡಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಬುಧವಾರ ಬಿಡುಗಡೆ ಮಾಡಿದೆ.
ಮುಂಬೈನ ಮಜಗಾನ್ ಡಾಕ್ಸ್ ಲಿಮಿಟೆಡ್ (MDL) ನಲ್ಲಿ ನಡೆದ ಸಮಾರಂಭದಲ್ಲಿ ಉಡಾವಣೆಯಾದ ಇದು ಮುಂದಿನ ವರ್ಷ ಇದನ್ನು ನೌಕಾಪಡೆಗೆ ನಿಯೋಜಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮುದ್ರ ಪ್ರಯೋಗಗಳನ್ನು ಪ್ರಾರಂಭಿಸುವ ಮೊದಲು ಎಮ್‌ಡಿಎಲ್ ತಂಡಗಳು ಈಗ ಶಸ್ತ್ರಾಸ್ತ್ರ ಮತ್ತು ಸಂವೇದಕ ಪ್ರಯೋಗಗಳನ್ನು ಒಳಗೊಂಡಂತೆ ಉಪಕರಣಗಳು ಮತ್ತು ಯಂತ್ರೋಪಕರಣಗಳ ಕೆಲಸದ ಏಕೀಕರಣ ಮತ್ತು ಸೆಟ್ಟಿಂಗ್ ಅನ್ನು ಪೂರ್ಣಗೊಳಿಸಬೇಕಾಗುತ್ತದೆ” ಎಂದು ಫ್ರಾನ್ಸ್‌ನ ನೇವಲ್ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.
ಅಕ್ಟೋಬರ್ 2005 ರಲ್ಲಿ ಸಹಿ ಮಾಡಿದ $3.75 ಬಿಲಿಯನ್ ಒಪ್ಪಂದದ ಅಡಿಯಲ್ಲಿ ನೇವಲ್ ಗ್ರೂಪ್‌ನಿಂದ ತಂತ್ರಜ್ಞಾನ ವರ್ಗಾವಣೆಯ ಅಡಿಯಲ್ಲಿ ಎಂಡಿಎಲ್ ನಿಂದ ಪ್ರಾಜೆಕ್ಟ್-75 ಅಡಿಯಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಯಿತು. ಮೊದಲನೆಯದು, 2017ರ ಡಿಸೆಂಬರ್ ನಲ್ಲಿ ಐಎನ್ ಎಸ್ ಕಲ್ವರಿ, ಸೆಪ್ಟೆಂಬರ್ 2019ರಲ್ಲಿ ಎರಡನೆಯದು ಐಎನ್ ಎಸ್ ಖಂಡೇರಿ, ಮೂರನೇ ಐಎನ್ ಎಸ್ ಕಾರಂಜ್, ಮಾರ್ಚ್ 2021ರಲ್ಲಿ ಮತ್ತು ನಾಲ್ಕನೆಯ ಐಎನ್ ಎಸ್ ವೇಲಾ, ಕಳೆದ ನವೆಂಬರ್‌ನಲ್ಲಿ ಸೇವೆಗೆ ಸೇರಿತು. 5ನೇ, ವಾಗೀರ್ ಅನ್ನು ನವೆಂಬರ್ 2020ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದು ಸಮುದ್ರ ಪ್ರಯೋಗಗಳಲ್ಲಿದೆ.
ಜಲಾಂತರ್ಗಾಮಿ ನೌಕೆಯನ್ನು ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಲೋಕಾರ್ಪಣೆ ಮಾಡಿದರು. ಲೋಕಾರ್ಪಣೆ ನಂತರ, ಜಲಾಂತರ್ಗಾಮಿ ನೌಕೆಯು ಸಂಪೂರ್ಣ ಯುದ್ಧಕ್ಕೆ ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಕಾಲ ಸಮಗ್ರ ಮತ್ತು ಕಠಿಣ ಪರೀಕ್ಷೆಗಳು ಮತ್ತು ಪ್ರಯೋಗಗಳಿಗೆ ಒಳಗಾಗುತ್ತದೆ. ಹಿಂದೂ ಮಹಾಸಾಗರದ ಮಾರಣಾಂತಿಕ ಆಳ ಸಮುದ್ರದ ಪರಭಕ್ಷಕ ಸ್ಯಾಂಡ್‌ಫಿಶ್‌ನ ಹೆಸರನ್ನು ಈ ನೌಕೆಗೆ ಇಡಲಾಗಿದೆ, ಮೊದಲ ಜಲಾಂತರ್ಗಾಮಿ 'ವಾಗಶೀರ್' ಅನ್ನು ಡಿಸೆಂಬರ್ 1974 ರಲ್ಲಿ ನಿಯೋಜಿಸಲಾಗಿತು. ಬಳಿಕ ಈ ನೌಕೆ ಏಪ್ರಿಲ್ 1997 ರಲ್ಲಿ ನಿವೃತ್ತಿಯಾಗಿತ್ತು.
ಈ ಹೊಸ 'ವಾಗಶೀರ್' ಜಲಾಂತರ್ಗಾಮಿ ನೌಕೆಯು ಅದರ ಹಿಂದಿನ ಆವೃತ್ತಿಯ ಇತ್ತೀಚಿನ ಅವತರಣಿಕೆಯಾಗಿದ್ದು, ಹಳೆಯ ಹಡಗು/ಜಲಾಂತರ್ಗಾಮಿ ನೌಕೆಯನ್ನು ನಿಷ್ಕ್ರಿಯಗೊಳಿಸಿದ ನಂತರವೂ, ಹೊಸ ಹಡಗು/ಜಲಾಂತರ್ಗಾಮಿಗೆ ಹಳೆಯ ನೌಕೆಯ ಹೆಸರಿನೊಂದಿಗೆ ಬದಲಾಯಿಸಲಾಗಿದೆ.
ನವೆಂಬರ್ 2020 ರಲ್ಲಿ, ನೌಕಾಪಡೆಯು ಪ್ರಾಜೆಕ್ಟ್-75 ಅಡಿಯಲ್ಲಿ ನಾಲ್ಕನೇ ಜಲಾಂತರ್ಗಾಮಿ ನೌಕೆಯನ್ನು ನಿಯೋಜಿಸಿತು. ಬಳಿಕ ಫೆಬ್ರವರಿಯಲ್ಲಿ, ಐದನೇ ಜಲಾಂತರ್ಗಾಮಿ ನೌಕೆಯ ಸಮುದ್ರ ಪ್ರಯೋಗಗಳು ಪ್ರಾರಂಭವಾದವು. ಅದರಂತೆ ಐಎನ್‌ಎಸ್ ಕಲ್ವರಿ, ಐಎನ್‌ಎಸ್ ಖಂಡೇರಿ ಮತ್ತು ಐಎನ್‌ಎಸ್ ಕರಂಗ್ ನೌಕೆಗಳು ಈಗಾಗಲೇ ಕಾರ್ಯಾರಂಭ ಮಾಡಿದೆ.