ಬೆಂಗಳೂರು: ಬಹುನಿರೀಕ್ಷೆಯ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡಗಡೆ ದಿನಾಂಕ ಹೊರಬಿದ್ದಿದೆ. ಜೂನ್ 10 ರಂದು ಚಿತ್ರಮಂದಿರಗಳಲ್ಲಿ 777 ಚಾರ್ಲಿ ಚಿತ್ರ ರಿಲೀಸ್ ಆಗಲಿದೆ.
3 ದಿನದ ಹಿಂದೆ ಏಪ್ರಿಲ್ 10 ರ ಬೆಳಗ್ಗೆ 11 ಗಂಟೆ 04 ನಿಮಿಷಕ್ಕೆ 777 ಚಾರ್ಲಿ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಲಾಗುತ್ತೆ ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದರು. ಅದರಂತೆ ರಾಮನವಮಿ ದಿನದಂದು ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
777 ಚಾರ್ಲಿ ಜೂನ್ 10, 2022ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರೀತಿ, ಆಶೀರ್ವಾದ ಸದಾ ಇರಲಿ. ರಾಮ ನವಮಿಯ ಈ ದೈವಿಕ ಸಂದರ್ಭದಲ್ಲಿ, ಧರ್ಮ ಮತ್ತು ಚಾರ್ಲಿಯ ಆಗಮನವನ್ನು ಘೋಷಿಸಲು ನಾವು ಹರ್ಷಿಸುತ್ತೇವೆ. 777 ಚಾರ್ಲಿ ಜೂನ್ 10 ರಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ 777 ಚಾರ್ಲಿ ಸಿನಿಮಾ ಕೋವಿಡ್ ಸೇರಿದಂತೆ ಹಲವು ಕಾರಣಗಳಿಂದ ರಿಲೀಸ್ ಡೇಟ್ ಮುಂದೂಡಿಕೆಯಾಗ್ತಿತ್ತು.
ಈಗಾಗಲೇ ಸಿನಿಮಾದ ಟೀಸರ್, ಪೋಸ್ಟರ್ ಮತ್ತು ಹಾಡುಗಳು ಭಾರೀ ನಿರೀಕ್ಷೆ ಹುಟ್ಟಿಸಿದ್ದು ಸಿನಿಮಾ ಬಿಡುಗಡೆ ಯಾವಾಗ ಆಗಲಿದೆ ಎಂಬ ತವಕ ಹೆಚ್ಚಾಗಿದೆ. ಈ ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಡ್ಯಾನಿಶ್ ಸೇಟ್ ಸೇರಿ ಹಲವರು ಅಭಿನಯಿಸಿರೋ ಈ ಚಿತ್ರವನ್ನ ಕಿರಣ್ ರಾಜ್ ನಿರ್ದೇಶಿಸಿದ್ದಾರೆ.