ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ತೊಳೆಯುವುದು ತುಂಬಾ ಸುಲಭ, ಒಗೆಯಲು ಇರುವ ಬಟ್ಟೆಯನ್ನು ಅದರೊಳಗೆ ತುರುಕಿ ನಂತರ ಡಿಟರ್ಜೆಂಟ್ ಪೌಡರ್ ಹಾಕಿ ಸ್ವಿಚ್ ಆನ್ ಮಾಡಿದರೆ ಆಯ್ತು ಬಟ್ಟೆ ಶುಭ್ರವಾಗುವುದು ಎಂದು ನೀವು ಭಾವಿಸಿದರೆ ನಿಮ್ಮ ಯೋಚನೆ ತಪ್ಪು ಎಂದು ನಾವು ಹೇಳುತ್ತೇವೆ.
ನೀವು ವಾಷಿಂಗ್ ಮೆಷಿನ್‌ನಲ್ಲಿ ಹೇಗೋ ಹೇಗೋ ಬಟ್ಟೆ ತುರುಕಿದರೆ ಬಟ್ಟೆಯ ಕೊಳೆ ಹೋಗುವುದಿಲ್ಲ, ಬಟ್ಟೆಯ ಕೊಳೆ ಹೋಗಲು ನೀವೇನು ಮಾಡಬೇಕು, ವಾಷಿಂಗ್ ಮೆಷಿನ್ ದೀರ್ಘಕಾಲ ಬಾಳಿಕೆ ಬರಲು ಯಾವ ಟ್ರಿಕ್ಸ್ ಪಾಲಿಸಬೇಕು ನೋಡಿ:
1. ಎಲ್ಲಾ ಬಟ್ಟೆಗಳನ್ನು ಒಂದೇ ದಿನ ಹಾಕಬೇಡಿ
ಕೆಲವರು ಎಲ್ಲಾ ಬಟ್ಟೆಗಳನ್ನು ಹಾಗೇ ಗುಡ್ಡೆ ಹಾಕಿ ವೀಕೆಂಡ್‌ಗೆ ಅಂತ ಇಡುತ್ತಾರೆ. ಹಾಗೆ ಮಾಡಬೇಡಿ. ನಿಮ್ಮ ವಾಷಿಂಗ್ ಮೆಷಿನ್ ಕೆಪಾಸಿಟಿಗೆ ತಕ್ಕಂತೆ ಬಟ್ಟೆ ಹಾಕ ವಾಶ್ ಮಾಡುತ್ತಾ ಇರಿ.
2. ವಾಷಿಂಗ್ ಮೆಷಿನ್ ಅನ್ನು ಸ್ವಚ್ಛ ಮಾಡದೇ ಇರಬೇಡಿ
ಒಮ್ಮೆ ಬಟ್ಟೆಯೆಲ್ಲಾ ವಾಶ್ ಆದ ಬಳಿಕ ಒಣ ಬಟ್ಟೆಯಿಂದ ಅದರ ಡ್ರಮ್, ರಬ್ಬರ್ ಒರೆಸಿ. ಆದರೆ ಹೆಚ್ಚಿನವರು ಹಾಗೆ ಮಾಡುವುದೇ ಇಲ್ಲ, ಇದರಿಂದ ಮೆಷಿನ್ ಬೇಗನೆ ಹಾಳಾಗುವುದು. ಅಲ್ಲದೆ ಮೆಷಿನ್ ಕೊಳೆ ಉಳಿದರೆ ಅದು ನೀವು ಬಟ್ಟೆ ಹಾಕುವಾಗ ಬಿಳಿ ಮುಂತಾದ ಲೈಟ್ ಬಣ್ಣದ ಬಟ್ಟೆಗಳಿಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು.
3. ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆ ಡಿಟರ್ಜೆಂಟ್ ಹಾಕುವುದು
ನಿಮ್ಮ ಬಟ್ಟೆ ಎಷ್ಟಿದೆಯೋ ಅಷ್ಟು ಡಿಟರ್ಜೆಂಟ್ ಬಳಸಬೇಕು. ತುಂಬಾ ಕಡಿಮೆ ಹಾಕಿದರೂ ಬಟ್ಟೆ ಶುಭ್ರವಾಗಲ್ಲ, ಹೆಚ್ಚು ಹಾಕಿದರೆ ತುಂಬಾ ನೊರೆ ಬಂದು ಹೊರ ಚೆಲ್ಲಬಹುದು. ಆದ್ದರಿಂದ ಸರಿಯಾದ ಪ್ರಮಾಣದಲ್ಲಿ ಬಳಸಿ.
4. ನಿಮ್ಮ ಬಟ್ಟೆಯನ್ನು ಸ್ಯಾನಿಟೈಸ್ ಮಾಡದೇ ಇರುವುದು ಬಟ್ಟೆಯನ್ನು ಒಗೆಯುವುದು ಬೇರೆ, ಸ್ಯಾನಿಟೈಸ್ ಮಾಡುವುದು ಬೇರೆ. ನೀವು ಸ್ವಲ್ಪ ಡೆಟಾಲ್ ಬಳಸಿ ಬಟ್ಟೆಯನ್ನು ಸ್ಯಾನಿಟೈಸ್ ಮಾಡಿ.
5. ಒದ್ದೆ ಬಟ್ಟೆಯನ್ನು ತುಂಬಾ ಹೊತ್ತು ಮೆಷಿನ್‌ನಲ್ಲೇ ಬಿಡುವುದು ಹೆಚ್ಚಿನವರು ಹಾಗೇ ಮಾಡುತ್ತಾರೆ, ಬಟ್ಟೆ ತೊಳೆದು ಆದ ಮೇಲೂ ತುಂಬಾ ಹೊತ್ತು ಹಾಗೇ ಇರುತ್ತದೆ, ಹಾಗೇ ಇಡುವುದರಿಂದ ನಿಮ್ಮ ಬಟ್ಟೆಯ ಶುಭ್ರತೆ ಹಾಳಾಗಬಹುದು.
6. ಬಟ್ಟೆಯನ್ನು ಪ್ರತ್ಯೇಕವಾಗಿ ಹಾಕದಿರುವುದು ನಮ್ಮ ಹತ್ತಿರ ಕಾಟನ್, ಸಿಲ್ಕ್, ನೈಲಾನ್ ಅಂತಾ ಅನೇಕ ಬಗೆಯ ಬಟ್ಟೆಇರುತ್ತದೆ. ಕೆಲವೊಂದು ತುಂಬಾ ಡೆಲಿಕೇಟ್ ಆಗಿರುತ್ತೆ. ಆದ್ದರಿಂದ ನಾವು ಎಲ್ಲಾ ಬಟ್ಟೆಗಳನ್ನು ಒಟ್ಟಿಗೆ ಹಾಕುವ ಬದಲಿಎ ಪ್ರತ್ಯೇಕ ಮಾಡಿ ವಾಶ್ ಮಾಡುವುದು ಗುಡ್ ಐಡಿಯಾ. ನಿಮ್ಮ ಜೀನ್ಸ್ ಪ್ರತ್ಯೇಕ ಹಾಕಿ, ಡೆಲಿಕೇಟ್ ಪ್ರತ್ಯೇಕ ಹಾಕಿ.
7. ಬಟ್ಟೆಯನ್ನು ಬಿಡಿಸಿ ಹಾಕದಿರುವುದು ನೀವು ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕುವಾಗ ಸರಿಯಾಗಿ ಬಿಡಿಸಿ ಮಗುಚಿ ಹಾಕಿ, ಶರ್ಟ್‌ನ ಕಾಲರ್, ಕೈಗಳು ಎಲ್ಲವನ್ನು ಬಿಡಿಸಿ ಹಾಕಿ. ಇಲ್ಲದಿದ್ದರೆ ಸರಿಯಾಗಿ ಕೊಳೆ ಹೋಗುವುದಿಲ್ಲ. ವಾಷಿಂಗ್ ಮೆಷಿನ್‌ನಲ್ಲಿ ಒಗೆಯುವ ಬಟ್ಟೆಯ ಕೊಳೆ ಸಂಪೂರ್ಣ ಹೋಗಬೇಕೆಂದರೆ ಈ ಗೋಲ್ಡನ್ ರೂಲ್ಸ್ ಫಾಲೋ ಮಾಡಲು ಮರೆಯದಿರಿ.