ಹೃದಯಾಘಾತದಿಂದ ವ್ಯಕ್ತಿ ಸತ್ತಾಗ ಅವರನ್ನು ಕೆಲವೇ ಗಂಟೆಗಳ ಹಿಂದೆ ಆರಾಮವಾಗಿ ಇದ್ದಿದ್ದನ್ನು ನೋಡಿದವರು ಇರುತ್ತಾರೆ. ಏನೋ ಕೆಲಸ ಮಾಡುತ್ತಿರುತ್ತಾರೆ, ಕುಸಿದು ಬೀಳುತ್ತಾರೆ, ಕೆಲವರ ಪ್ರಾಣ ಅಲ್ಲಿಯೇ ಹೋಗಿರುತ್ತಾರೆ. ನಡೆದಾಡುವಾಗ, ಮಲಗಿದಾಗ, ಕೂತಾಗ ಹೀಗೆ ಸುಳಿವೇ ಸಿಗದೆ ಯಮ ಬಂದು ತನ್ನ ಪಾಶ ಬೀಸಿರುತ್ತಾನೆ.
ಕೆಲವರಂತೂ ತುಂಬಾನೇ ಆರೋಗ್ಯದಿಂದ ಇರುತ್ತಾರೆ, ಆದರೆ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಿರುತ್ತದೆ. ಹೃದಯಾಘಾತ ಒಂದು ಚಿಕ್ಕ ಸುಳಿವು ಸಿಕ್ಕರೂ ಬದುಕಿಸಿಕೊಳ್ಳುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ ಹೃದಯಾಘಾತ ಮುನ್ಸೂಚನೆ ತಿಂಗಳ ಮುಂಚೆ ಕೆಲ ವಾರಗಳ ಮುಂಚೆಯೇ ಸಿಕ್ಕಿರುತ್ತದೆ, ಆದರೆ ಅದರತ್ತ ಗಮನ ನೀಡದೆ ಅಪಾಯ ಸಂಭವಿಸುವುದು, ಅಲ್ಲದೆ ಆ ಸೂಚನೆಗಳನ್ನು ಬೇರೆ ಸಮಸ್ಯೆಯೆಂದು ಭಾವಿಸುತ್ತಾರೆ. ಉದಾಹರಣೆಗೆ ವಾಂತಿ ಬಂದಂತೆ ಅನಿಸುವುದು, ಎದೆ ಉರಿ, ತಲೆಸುತ್ತು).
ಹೃದಯಾಘಾತವಾಗುತ್ತೆ ಎಂದು ಮುನ್ಸೂಚನೆ ಕೊಡುವ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ:1. ಎದೆಯಲ್ಲಿ ಏನೋ ಒಂದು ರೀತಿಯ ಬಿಗಿತ ನೀವು ಅದರತ್ತ ತುಂಬಾ ಗಮನ ಕೊಡುವಷ್ಟು ಇಲ್ಲದಿರಬಹುದು, ಆರೆ ಏನೋ ಒಂದು ರೀತಿ ಎದೆ ಬಿಗಿದಂಥ ಅನುಭವ ಇರುತ್ತದೆ. ಹೃದಯದ ರಕ್ತನಾಳಗಳು ಬ್ಲಾಕ್ ಆದಾಗ ಹೃದಯದ ನರಗಳು ಹೆಚ್ಚು ಒತ್ತಡವನ್ನು ಹಾಕಬೇಕಾಗುತ್ತದೆ. ಆದ್ದರಿಂದ ಸ್ವಲ್ಪ ನೋವು ಉಂಟಾಗುವುದು. ಈ ನೋವು ಸ್ವಲ್ಪ ಬಂದು ನಂತರ ಹೋಗುವುದು.
2. ದೇಹದ ಇತರ ಭಾಗಗಳಲ್ಲಿ ನೋವು ಹೃದಯಾಘಾತದ ಸೂಚನೆ ಹೃದಯ ಭಾಗದಲ್ಲಿ ಅಲ್ಲದೆ ದೇಹದ ಇತರ ಕಡೆಯೂ ಕಂಡು ಬರುವುದು. ಹೃದಯದ ಕಾರ್ಯದಲ್ಲಿ ವ್ಯತ್ಯಾಸವಾದಾಗ ನೋವಿನ ಸೂಚನೆ ಮೆದುಳು, ಎದೆಭಾಗ, ಕಿಬ್ಬೊಟ್ಟೆ, ಕುತ್ತಿಗೆಗೆ ಕಳುಹಿಸುವುದರಿಂದ ಹೃದಯ ಭಾಗದಲ್ಲಿ ಅಲ್ಲದೆ ಈ ಭಾಗಗಗಳಲ್ಲೂ ನೋವುವು ಕಂಡು ಬರಬಹುದು.
3. ಸುಸ್ತು ಅನೇಕ ಕಾರಣಗಳಿಂದ ಸುಸ್ತು ಉಂಟಾಗಬಹುದು. ಸಾಕಷ್ಟು ನೀರು ಕುಡಿಯದಿದ್ದಾಗ, ಸರಿಯಾದ ಪೋಷಕಾಂಶದ ಆಹಾರ ಸೇವಿಸದಿದ್ದಾಗ, ಉಂಟಾಗಬಹುದು. ಆದರೆ ಸುಸ್ತು ಜೊತೆಗೆ ಎದೆಯಲ್ಲಿ ಸ್ವಲ್ಪ ನೋವಿದ್ದರೆ ರಕ್ತದ ಕಡಿಮೆಯಾಗಿದೆ, ಹೃದಯಾಘಾತವಾಗಬಹುದು ಎಂಬುವುದರ ಸೂಚನೆಯಾಗಿದೆ.
4. ತಲೆಸುತ್ತು ಮಹಿಳೆಯರಲ್ಲಿ ಹೃದಯಾಘಾತಕ್ಕೆ ತಿಂಗಳ ಮುಂಚೆ ತಲೆಸುತ್ತು ಕಂಡು ಬರುವುದು ಎಂದು ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ ರಿಪೋರ್ಟ್ ಹೇಳಿದೆ. National Heart, Blood, and Lung Institute ಮಹಿಳೆಯರಲ್ಲಿ ಹೃದಯಘಾತದ ಸೂಚನೆ ಮುಖ್ಯವಾಗಿ ಗೊತ್ತಾಗುವುದು ಎಂದು ಹೇಳಿದ್ದಾರೆ.
5. ವಾಂತಿ ಅಥವಾ ಅಜೀರ್ಣ ಹೃದಯ ಭಾಗಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗದಿದ್ದರೆ ಹೊಟ್ಟೆ ಕಿವುಚಿಂತೆ, ವಾಂತಿ, ಅಜೀರ್ಣ ಈ ರೀತಿಯ ಸಮಸ್ಯೆ ಕಂಡು ಬರುವುದು. ಈ ರೀತಿಯಾದಾಗ ಸಾಕಷ್ಟು ಬಾರಿ ಅಜೀರ್ಣ ಎಂದೇ ಭಾವಿಸುತ್ತೇವೆ. ಏಕೆಂದರೆ ಅಜೀರ್ಣ ಲಕ್ಷಣಗಳು ಕೂಡ ಹೀಗೇ ಇರುತ್ತದೆ. ನೀವು ಎದೆ ಉರಿ ಹಾಗೂ ಈ ರೀತಿಯ ಲಕ್ಷಣಗಳು ಕಂಡು ಬಂದಾಗ ತಜ್ಞರನ್ನು ಭೇಟಿಯಾಗಿ ಹಾಗೂ ಇಸಿಜಿ ಪರೀಕ್ಷೆ ಮಾಡಿಸಿ.
6. ಬೆವರುವುದು ವ್ಯಾಯಾಮ ಮಾಡಿದಾಗ , ಮೆನೋಪಾಸ್ ಸಮಯದಲ್ಲಿ ಮೈ ಬೆವರುವುದು. ಆದರೆ ಸುಮ್ಮನೆ ಮೈ ಬೆವರುತ್ತಿದ್ದರೆ ಜೊತೆಗೆ ಎದೆಯಲ್ಲಿ ನೋವಿದ್ದರೆ ಅದು ಹೃದಯಾಘಾತದ ಲಕ್ಷಣವಾಗಿದೆ.
7. ಹೃದಯ ಬಡಿತ ಹೃದಯ ಸರಿಯಾದ ರಕ್ತ ಪೂರೈಕೆ ಮಾಡದಿದ್ದರೆ ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗುವುದು. ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.
8. ಉಸಿರಾಟದಲ್ಲಿ ತೊಂದರೆ ಆರಾಮವಾಗ ಮೆಟ್ಟಿಲು ಹತ್ತುತ್ತಿದ್ದರಿಗೆ ಈಗ ನಡೆದಾಡುವಾಗ ಉಸಿರಾಟದಲ್ಲಿ ತೊಂದರೆಯಾಗುತ್ತಿದ್ದರೆ ನೀವು ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿ.