ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಏರಿಕೆಯಾಗಿದೆ. ಭಾನುವಾರ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ 80 ಪೈಸೆಗಳಷ್ಟು ಏರಿಕೆಯಾಗಿದೆ. ಎರಡು ವಾರಕ್ಕೂ ಕಡಿಮೆ ಅವಧಿಯಲ್ಲಿ ಒಟ್ಟಾರೇ ಬೆಲೆಯಲ್ಲಿ ರೂ. 8 ರಷ್ಟು ಹೆಚ್ಚಳವಾಗಿದೆ.
ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಈ ಹಿಂದೆ ರೂ. 102.61 ರಷ್ಟಿದ್ದ ಲೀಟರ್ ಪೆಟ್ರೋಲ್ ಬೆಲೆ ಇದೀಗ 103. 41 ಪೈಸೆಯಷ್ಟಾಗಿದೆ.
ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 93. 87 ಪೈಸೆಯಿಂದ ರೂ. 94. 67 ರಷ್ಟು ಹೆಚ್ಟಾಗಿದೆ. ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದೆ ಮತ್ತು ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗಲಿದೆ.
ಮಾರ್ಚ್ 22 ರ ದರ ಪರಿಷ್ಕರಣೆಯಂತೆ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮದ ನಂತರ ಬೆಲೆಯಲ್ಲಿ 11 ಬಾರಿಗೆ ಹೆಚ್ಚಳವಾಗಿದೆ.ಒಟ್ಟಾರೆ ಪೆಟ್ರೋಲ್ ಬೆಲೆ ಲೀಟರ್‌ಗೆ 8 ರೂ. ನಷ್ಟ ಹೆಚ್ಚಾಗಿದೆ.