HEALTH TIPS

ಸೋಲೋ ಬೈಕ್‍ನಲ್ಲಿ 8040 ಕಿ.ಮೀ. ಪ್ರಯಾಣಿಸಿದ ಕುಂಬಳೆಯ ಅಮೃತ ಜೋಶಿ

                    ಕುಂಬಳೆ:  ಒಂದು ದೇಶ, ಒಂದು ಜನತೆ ಎಂಬ ಸಂದೇಶದೊಂದಿಗೆ ಅತೀ ಕಿರಿಯ 21 ನೇ ವಯಸ್ಸಿನಲ್ಲಿ ಒಬ್ಬಂಟಿಯಾಗಿ ಈಶಾನ್ಯ ರಾಜ್ಯಗಳಿಗೆ ಸೋಲೋ ಬೈಕ್‍ನಲ್ಲಿ ಪ್ರಯಾಣ ಆರಂಭಿಸಿದ ಕುಂಬಳೆ ನಿವಾಸಿ ಅಮೃತ ಜೋಶಿ ತಮ್ಮ 60 ದಿವಸಗಳ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

                 ಕಳೆದ 2022 ಫೆಬ್ರವರಿ 5 ರಿಂದ ಕೇರಳದ ಕಲ್ಲಿಕೋಟೆಯಿಂದ  ಆರಂಭಿಸಿ ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ದುರ್ಗಮ ಪ್ರದೇಶವಾಗಿರುವ ಸಪ್ತ ಸಹೋದರಿಯರ ನಾಡೆಂದು ಕರೆಸಿಕೊಳ್ಳುವ ಅಸ್ಸಾಂ, ಮೇಘಾಲಯ, ತ್ರಿಪುರ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್,  ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯವನ್ನು ಸಂದರ್ಶಿಸಿ ನೆರೆಯ ವಿದೇಶಿ ರಾಷ್ಟ್ರವಾದ ಬಾಂಗ್ಲಾದೇಶ, ಮ್ಯಾನ್ಮಾರ್ ಕೂಡಾ ಸಂದರ್ಶಿಸಿದ್ದಾರೆ. ಅಮೃತ ಜೋಶಿ 8040 ಕಿಲೋಮೀಟರ್ ಪ್ರಯಾಣವನ್ನು ಇದುವರೆಗೆ ಪೂರೈಸಿದ್ದಾರೆ.

                  ತಮ್ಮ ಪ್ರಯಾಣ ಆರಂಭಿಸಿದಲ್ಲಿಂದ ಅಪಾರ ಬೆಂಬಲಿಗರ, ಹಿತೈಷಿಗಳ ಸಹಾಯ, ಸಹಕಾರ, ಪೆÇ್ರೀತ್ಸಾಹದಿಂದ ಪ್ರೇರಣೆಗೊಂಡು ದೇಶದ ಉಳಿದ ರಾಜ್ಯಗಳಿಗೂ ತಮ್ಮ ಪ್ರಯಾಣವನ್ನು ವಿಸ್ತರಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.

              ವಿದೇಶಿ ರಾಷ್ಟ್ರವಾದ ನೇಪಾಳದಿಂದ ಆರಂಭಿಸಿ ಭಾರತದಲ್ಲಿನ ರಾಜ್ಯಗಳಾದ ಬಿಹಾರ, ಝಾರ್ಖಂಡ್, ಛÀತ್ತಿಸಗಡ್, ಉತ್ತರ ಪ್ರದೇಶ, ಉತ್ತರಖಂಡ್, ಹಿಮಾಚಲ್ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಕ್, ಪಂಜಾಬ್, ಹರಿಯಾಣ, ದೆಹಲಿ, ರಾಜಸ್ತಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಣ, ಗೋವಾ, ಕರ್ನಾಟಕ ಹಾಗೂ ಕೊನೆಯಲ್ಲಿ ಕೇರಳದ ಕಾಸರಗೋಡಿನಲ್ಲಿ ತಮ್ಮ ಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ.

'ಸಿ.ಆರ್.ಎಫ್. ವುಮನ್ ಒನ ವೀಲ್ಸ್' ಎಂಬ ಕ್ಲಬಿನ ಸದಸ್ಯೆಯಾಗಿರುವ ಅಮೃತ ಜೋಶಿ ಕುಂಬಳೆ ನಿವಾಸಿಗಳಾದ ದಿ.ಅಶೋಕ್ ಜೋಶಿ ಹಾಗೂ ಅನ್ನಪೂರ್ಣ ಜೋಶಿ ದಂಪತಿಗಳ ಕಿರಿಯ ಪುತ್ರಿಯಾಗಿದ್ದಾಳೆ.


              ಅಭಿಮತ: 

           ` ನಾನು ಈಶಾನ್ಯ ರಾಜ್ಯದಲ್ಲಿ ಪ್ರಯಾಣ ಆರಂಭಿಸಿದಾಗ  ಎಲ್ಲರೂ ನನ್ನಲ್ಲಿ ಹೇಳಿದ್ದರು. ಈಶಾನ್ಯ ರಾಜ್ಯಗಳು  ಸುರಕ್ಷಿತವಲ್ಲ ಎಂದಿದ್ದರು. ಆದರೆ ನಾನು ಈ ಸವಾರಿಯನ್ನು ಮುಗಿಸಿದ ನಂತರ ಈಶಾನ್ಯವು ತುಂಬಾ ಸುರಕ್ಷಿತ ಸ್ಥಳವಾಗಿದೆ ಮತ್ತು ಜನರು ಮೃದು ಮನಸ್ಸಿನವರು ಎಂದು ಹೇಳಬಲ್ಲೆ. ಅವರ ಪ್ರೀತಿ ಮತ್ತು ಬೆಂಬಲದಿಂದಾಗಿ ನಾನು ಇಡೀ ಭಾರತವನ್ನು ಪೂರ್ಣಗೊಳಿಸಲು ನಿರ್ಧರಿಸಿದೆ.

    ` - ಅಮೃತ ಜೋಶಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries