ಕೊಲ್ಲಂ: ಹಣಕ್ಕೆ ಬೇಡಿಕೆಯಿಟ್ಟಿದ್ದಕ್ಕೆ 84 ವರ್ಷದ ತಾಯಿಗೆ ಮಗ ಥಳಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಅವರ ಪುತ್ರ ಓಮನಕುಟ್ಟನ್ ನನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಓಮನಕುಟ್ಟನ್ ತನ್ನ ತಾಯಿಯನ್ನು ಕುಡಿದ ಮತ್ತಿನಲ್ಲಿ ಥಳಿಸಿದ್ದಾನೆ ಎಂದು ಪೋಲೀಸರು ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದ್ದಾರೆ.
ಆದರೆ.........ತನ್ನ ಪುತ್ರ ತನ್ನನ್ನು ಹೊಡೆಯಲಿಲ್ಲ, ಸ್ವಲ್ಪ ದೂಡಿದ್ದು ಈ ವೇಳೆ ಕುಸಿದು ಬಿದ್ದೆ. ಅಲ್ಲಿಗೆ ಬಂದ ಪುತ್ರ ಒಮ್ಮೆಯಷ್ಟೇ ಹೊಡೆದಂತೆ ಮಾಡಿದ ಎಂದು ತಾಯಿ ಹೇಳಿದ್ದಾರೆ. ಆದರೆ ದೃಶ್ಯಾವಳಿ ಹಾಗೂ ಸ್ಥಳೀಯರ ಹೇಳಿಕೆ ಆಧರಿಸಿ ಪೋಲೀಸರು ಕ್ರಮ ಕೈಗೊಂಡಿದ್ದಾರೆ. ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓಮನಕುಟ್ಟನ್ ಬಂಧನವನ್ನು ಶೀಘ್ರದಲ್ಲೇ ದಾಖಲಿಸಲಾಗುವುದು ಮತ್ತು ನಾಳೆ ಕಸ್ಟಡಿಗೆ ಹಾಜರುಪಡಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.
84 ವರ್ಷದ ತಾಯಿ ಮಗನಿಗೆ ಹಣ ನೀಡಿದ್ದರು. ಹಣವನ್ನು ಹಿಂದಿರುಗಿಸುವಂತೆ ತಾಯಿ ಒತ್ತಾಯಿಸಿದಾಗ ತನ್ನ ತಾಯಿಯನ್ನು ಅಮಾನುಷವಾಗಿ ಥಳಿಸಿದ್ದಾನೆ. ಸ್ಥಳೀಯರು ನೀಡಿರುವ ಮಾಹಿತಿಯಂತೆ ವೃದ್ದೆಯ ಪುತ್ರ ಓಮನಕುಟ್ಟನ್ ಇದಕ್ಕೂ ಮುನ್ನ ತನ್ನ ತಾಯಿಯನ್ನು ಬರ್ಬರವಾಗಿ ಹಲವು ಬಾರಿ ಥಳಿಸಿದ್ದಾನೆ ಎಂದು ತಿಳಿಸಿರುವರು.
ಆದರೂ ವೃದ್ದೆ ಮಾತೆ ತನ್ನ ಪುತ್ರನ ಮೇಲಿನ ಮಮಕಾರದಿಂದ ಪೋಲೀಸರಿಗೆ ದೂರು ನೀಡಲೂ ಹಿಂದೇಟು ಹಾಕಿರುವುದು ಹೆತ್ತೊಡಲಿನ ಕಕ್ಕುಲತೆಯ ಸೂಚಕವಾಗಿ ಆಧುನಿಕ ಜಗತ್ತಿಗೆ ನಿಬ್ಬೆರಗುಗೊಳಿಸುತ್ತದೆ...ಅಲ್ಲವೇ....ನೀವು ಅಮ್ಮನನ್ನೊಮ್ಮೆ ನೆನಪಿಸಿ...ಪ್ಲೀಸ್....