HEALTH TIPS

ಪೆಟ್ರೋಲ್,ಡೀಸೆಲ್: ಎರಡು ವಾರಗಳಲ್ಲಿ ಪ್ರತಿ ಲೀಟರ್ ಗೆ 8.40 ರೂ.‌ ಹೆಚ್ಚಳ

                   ನವದೆಹಲಿ :  ಪೆಟ್ರೋಲ್  ಮತ್ತು ಡೀಸೆಲ್ ಬೆಲೆಗಳನ್ನು ಸೋಮವಾರ ಪ್ರತಿ ಲೀ.ಗೆ ತಲಾ 40 ಪೈಸೆ ಹೆಚ್ಚಿಸಲಾಗಿದೆ. ಇದರೊಂದಿಗೆ ಕಳೆದ ಎರಡು ವಾರಗಳಲ್ಲಿ ಈ ಇಂಧನಗಳ ಬೆಲೆಗಳಲ್ಲಿ ಒಟ್ಟು ತಲಾ 8.40 ರೂ.ಏರಿಕೆಯಾಗಿದೆ.

          ದಿಲ್ಲಿಯಲ್ಲಿ ಈಗ ಪ್ರತಿ ಲೀ.ಪೆಟ್ರೋಲ್ ಬೆಲೆ 103.41 ರೂ.ನಿಂದ 103.81 ರೂ.ಗೆ ಮತ್ತು ಡೀಸೆಲ್ ಬೆಲೆ 94.67 ರೂ.ನಿಂದ 95.0

7 ರೂ.ಗೆ ಏರಿಕೆಯಾಗಿವೆ.

         ದೇಶಾದ್ಯಂತ ಬೆಲೆಗಳನ್ನು ಹೆಚ್ಚಿಸಲಾಗಿದ್ದು,ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಏರಿಕೆ ಪ್ರಮಾಣವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.

             ನಾಲ್ಕೂವರೆ ತಿಂಗಳ ವಿರಾಮದ ಬಳಿಕ ಮಾ.22ರಂದು ಇಂಧನ ಬೆಲೆಗಳ ಪರಿಷ್ಕರಣೆ ಆರಂಭಗೊಂಡಾಗಿನಿಂದ ಇಂದಿನದು 12ನೇ ಏರಿಕೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries