ಮಂಜೇಶ್ವರ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2021 ಡಿಸೆಂಬರ್ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಆಸಾವರಿ ಹೊಸಂಗಡಿ ಶೇಕಡಾ 98 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಮಂಜೇಶ್ವರ ನಾಟ್ಯ ನಿಲಯಂನ ಗುರುಗಳಾದ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆ. ದಿವ್ಯ ಬಿ. ಹೊಸಂಗಡಿ ಮತ್ತು ಡಾ. ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರ ಪುತ್ರಿ. ಮಂಜೇಶ್ವರ ಡಾನ್ ಬಾಸ್ಕೋ ವಿದ್ಯಾಲಯದ 7ನೇ ತರಗತಿಯ ವಿದ್ಯಾರ್ಥಿನಿ.