ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲ ದರ 100 ಡಾಲರ್ಗಿಂತ ಕೆಳಗಿಳಿದಿರುವ ಪರಿಣಾಮ ಪೆಟ್ರೋಲ್ ಹಾಗೂ ಡೀಸೆಲ್ ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಕ್ಷೀಣಿಸಿದೆ. ಇದಕ್ಕೆ ಪುಷ್ಟಿಯೆಂಬಂತೆ, ಕಳೆದ ನಾಲ್ಕು ದಿನಗಳಿಂದ ತೈಲ ದರ ಪರಿಷ್ಕರಣೆ ಆಗಿಲ್ಲ.
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲ ದರ 100 ಡಾಲರ್ಗಿಂತ ಕೆಳಗಿಳಿದಿರುವ ಪರಿಣಾಮ ಪೆಟ್ರೋಲ್ ಹಾಗೂ ಡೀಸೆಲ್ ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಕ್ಷೀಣಿಸಿದೆ. ಇದಕ್ಕೆ ಪುಷ್ಟಿಯೆಂಬಂತೆ, ಕಳೆದ ನಾಲ್ಕು ದಿನಗಳಿಂದ ತೈಲ ದರ ಪರಿಷ್ಕರಣೆ ಆಗಿಲ್ಲ.
ಸದ್ಯ ಬ್ಯಾರಲ್ ಕಚ್ಚಾತೈಲ ದರ 99 ಡಾಲರ್ಗೆ ಇಳಿಕೆಯಾಗಿದೆ. ಇಷ್ಟಾದರೂ ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಮೌಲ್ಯ ಬಲಿಷ್ಠವಾಗುತ್ತ ಸಾಗುತ್ತಿದೆ. ಪರಿಣಾಮ ಯಾವುದನ್ನೂ ಊಹಿಸುವುದು ಸಾಧ್ಯವಾಗುತ್ತಿಲ್ಲ ಎಂದೂ ಪರಿಣತರು ಹೇಳುತ್ತಾರೆ. ಕಚ್ಚಾತೈಲ ಉತ್ಪಾದಕ ರಾಷ್ಟ್ರಗಳಿಂದ ಗರಿಷ್ಠ ಆಮದು ಮಾಡಿಕೊಳ್ಳುವ ಚೀನಾ, ಭಾರತ, ಯುರೋಪ್ಗಳಲ್ಲಿ ಕೋವಿಡ್ 19 ಸಂಕಷ್ಟದ ಕಾರಣ ಆಮದು ಪ್ರಮಾಣ ಕಡಿಮೆ ಆಗಿತ್ತು. ಈಗ ಚೇತರಿಕೆ ಕಂಡಿರುವುದು ಕೊಂಚ ಸಮಾಧಾನಕರ ಸಂಗತಿ.
ಭಾರತ ತನ್ನ ಕಚ್ಚಾತೈಲ ಆಮದು ಪ್ರಮಾಣದಲ್ಲಿ ಶೇ.2 ಅನ್ನು ರಷ್ಯಾದಿಂದ ತರಿಸಿಕೊಳ್ಳುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಏ.7ರಿಂದ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಆಗಿಲ್ಲ. ಏಪ್ರಿಲ್ 7ರಂದು ಭಾರತದಲ್ಲಿ ಕಚ್ಚಾತೈಲ ದರ ಪ್ರತಿ ಬ್ಯಾರೆಲ್ಗೆ 97.59 ಡಾಲರ್ ಇತ್ತು. ಮಾರ್ಚ್ ಮಧ್ಯಭಾಗದಲ್ಲಿ ಇದು 128 ಡಾಲರ್ ತಲುಪಿತ್ತು. ಅಲ್ಲಿಂದೀಚೆಗೆ ಶೇ.24 ದರ ಕುಸಿತ ಕಂಡಿದೆ. ಏ.6ರಂದು ಪೆಟ್ರೋಲ್, ಡೀಸೆಲ್ ದರ ಲೀಟರಿಗೆ 80 ಪೈಸೆ ಏರಿತ್ತು. ಏ.6ರ ತನಕ ಒಟ್ಟು 16 ದಿನಗಳಲ್ಲಿ 14 ದಿನ ದರ ಏರಿದ್ದು, ಒಟ್ಟು 10 ರೂ. ಹೆಚ್ಚಳ ಕಂಡಿದೆ.
ಹೆಚ್ಚಿದ ಬೇಡಿಕೆ: ಕೇಂದ್ರ ತೈಲ ಸಚಿವಾಲಯದ ಪೆಟ್ರೋಲಿಯಂ ಪ್ಲಾಯನಿಂಗ್ ಮತ್ತು ಅನಾಲಿಸಿಸ್ ಸೆಲ್ನ ದತ್ತಾಂಶದ ಪ್ರಕಾರ, 2019ರ ಮಾರ್ಚ್ ನಂತರ ಈವರೆಗೆ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ 19.41 ದಶಲಕ್ಷ ಟನ್ ಆಗಿದೆ. ಕಳೆದ ತಿಂಗಳು ದೇಶದ ಇಂಧನ ಬೇಡಿಕೆ ಪ್ರಮಾಣ 3 ವರ್ಷಗಳಲ್ಲೇ ಗರಿಷ್ಠ ಮಟ್ಟ ಎಂದರೆ ಶೇ.4.2 ಏರಿದೆ. ಡೀಸೆಲ್ ಹೆಚ್ಚು ಬಳಕೆಯಲ್ಲಿರುವ ಇಂಧನವಾಗಿದ್ದು, ಇದು ಶೇ.40 ಏರಿದೆ. ಇದರ ಬೇಡಿಕೆ ಶೇಕಡ 6.7 ಹೆಚ್ಚಾಗಿ 7.7 ದಶಲಕ್ಷ ಟನ್ ಆಗಿದೆ. ಪೆಟ್ರೋಲ್ ಮಾರಾಟ ಶೇ.6.1 ಏರಿಕೆಯಾಗಿದ್ದು, 2.91 ದಶಲಕ್ಷ ಟನ್ ಆಗಿದೆ. ಎಲ್ಪಿಜಿ (ಅಡುಗೆ ಅನಿಲ) ಬೇಡಿಕೆ ಶೇ.9.8 ಹೆಚ್ಚಾಗಿ 2.48 ದಶಲಕ್ಷ ಟನ್ಗೆ ತಲುಪಿದೆ.
ಎಷ್ಟು ಹೆಚ್ಚಳ?: ಮಾ.22-ಏ.7ರ ನಡುವೆ, ಪೆಟ್ರೋಲ್, ಡೀಸೆಲ್ ದರ ಲೀಟರಿಗೆ 10 ರೂ. ಹೆಚ್ಚಾಗಿದೆ.
ಶೇ.4.2: ಮಾರ್ಚ್ನಲ್ಲಿ ಹೆಚ್ಚಾದ ತೈಲ ಬೇಡಿಕೆ ಪ್ರಮಾಣ.