ಮಂಜೇಶ್ವರ: ವರ್ಕಾಡಿ ಚಾವಡಿಬೈಲುಗುತ್ತು ಗಡುಪಾಡಿ ಮನೆಯಲ್ಲಿ ನಡೆಯುವ ಶ್ರೀ ಮಡಿಕತ್ತಾಯ ಮತ್ತು ಕುಟುಂಬದ ಧರ್ಮದೈವಗಳ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮಡಿಕತ್ತಾಯ ಶ್ರೀಧೂಮಾವತೀ ಬಂಟದೈವಗಳ ಧರ್ಮ ನೇಮದ ಪೂರ್ವಭಾವಿಯಾಗಿ ವರ್ಕಾಡಿ ಕಾವೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಧರ್ಮನೇಮದ ಚಾವಡಿ ವರೆಗೆ ಜರುಗಿತು.
ಮಡಿಕತ್ತಾಯ ಶ್ರೀಧೂಮಾವತೀ ಬಂಟದೈವಗಳ ಧರ್ಮ ನೇಮ ಏ. 28ರಂದು ಬೆಳಗ್ಗೆ 10ಕ್ಕೆ ಜರುಗಲಿರುವುದು. ಸಂಜೆ 6ಕ್ಕೆ ಶ್ರೀ ಧೂಮಾವತೀ ಬಂಟ ದೈವದ ನೇಮ ನಡೆಯುವುದು.