ಕಾಸರಗೋಡು: ಪರಿಸರದ ಮೇಲೆ ದುಷ್ಪರಿಣಾಮ ಬೀರಿ ಅಪಾರ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತಿರುವ ಕೆ-ರೈಲ್ ಯೋಜನೆ ವಿರೋಧಿಸಿ ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಬೃಹತ್ ಮೆರವಣಿಗೆ ಮೂಲಕ ಅಗಮಿಸಿದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಹಾಯಿಸಿದರು. ಪರಿಸರ ಹಾಗೂ ಜನತೆಗೆ ಮಾರಕವಾಗಿರುವ ಕೆ-ರೈಲು ಯೋಜನೆಯ ಗಡಿ ಕಲ್ಲುಗಳನ್ನು ಮನೆಯ ಮೇಲೆ ಹಾಕಲು ಯೂತ್ ಲೀಗ್ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಈ ಸಂದರ್ಭ ಪ್ರತಿಭಟನಾಕಾರರು ಗಡಿ ಕಲ್ಲನ್ನು ಕಲೆಕ್ಟರೇಟ್ ಆವರಣಕ್ಕೆ ಎಸೆದು ಪ್ರತಿಭಟಿಸಿದರು. ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ವಿ.ಪಿ.ಅಬ್ದುಲ್ ಖಾದರ್ ಧರಣಿ ಉದ್ಘಾಟಿಸಿದರು ಜಿಲ್ಲಾ ಯೂತ್ ಲೀಗ್ ಅಧ್ಯಕ್ಷ ಅಜೀಜ್ ಕಳತ್ತೂರು ಅಧ್ಯಕ್ಷತೆ ವಹಿಸಿದ್ದರು.
ಮುಸ್ಲಿಂ ಲೀಗ್ ಮಂಡಲ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಕುಞÂ ಚೆರ್ಕಳ, ರಾಜ್ಯ ಯೂತ್ ಲೀಗ್ ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ.ಡಿ.ಕಬೀರ್ ಮತ್ತು ಯೂಸುಫ್ ಉಳುವಾರ್, ಜಿಲ್ಲಾ ಯೂತ್ ಲೀಗ್ ಪದಾಧಿಕಾರಿಗಳಾದ ಶಾನವಾಸ್ ಪಳ್ಳಿಕ್ಕರ, ಶಿಹಾಬ್ ಮಾಸ್ಟರ್, ಎಂ.ಎ.ನಜೀಬ್, ಹಾರಿಸ್ ತಾಯಲ್, ಹಾರಿಸ್ ಅಂಕಕಲಾರಿ,ಬತೀಶ ಪೆÇವೆಲ್, ಶಂಶುದ್ದೀನ್ ಅವಿಯಿಲ್, ನೌಶಾದ್ ಕಾಞಂಗಾಡ್, ರಹಮಾನ್ ಗೋಲ್ಡನ್, ನೂರುದ್ದೀನ್ ಬೆಳ್ಳಿಂಚಮ್, ಎಂ.ಪಿ.ಖಾಲೀದ್, ರವೂಫ್ ಬಾವಿಕ್ಕರ, ನದೀರ್ ಕೋಯಿಕಲ್, ಟಿ.ಎಸ್.ನಜೀಬ್, ಹಾರಿಸ್ ಬೆದಿರ, ಖಾದರ್ ಆಲೂರ್, ರಮೀಜ್ ಆರಂಗಡಿ, ಸಾಲಿದ್ ಪಟ್ಣ ನೇತೃತ್ವ ವಹಿಸಿದ್ದರು.