ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಹಿರಿಯ ಪ್ರಾಥಮಿಕ ಕನ್ನಡ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಪರಿಕರಗಳು ಮತ್ತು ಪ್ರೊಜೆಕ್ಟರ್ ಗಳ ಕೊಡುಗೆಯಾಗಿ ನೀಡಲಾಗಿದೆ.
ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗಲಿರುವ ಮುಖ್ಯೋಪಾಧ್ಯಾಯಿನಿ ಪಿಕೆ. ತಂಗಮಣಿ ಟೀಚರ್ ಕೊಡುಗೆಯಾಗಿ ನೀಡಿ ಮಾತನಾಡಿ ಮಾಹಿತಿ ತಂತ್ರಜ್ಞಾನದ ಪ್ರಯೋಜನವನ್ನು ಮಕ್ಕಳು ಹೆಚ್ಚು ಉಪಯೋಗಿಸಿ ವಿದ್ಯಾಭ್ಯಾಸದಲ್ಲಿ ಮುಂದುವರಿಯಬೇಕೆಂದು ಕರೆಯಿತ್ತರು. ಹಿರಿಯ ಅಧ್ಯಾಪಕಿ ಪ್ರಭಾವತಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ನಿರಂಜನ ರೈ ಪೆರಡಾಲ, ಜೋಶ್ನಾ ಕಡಂದೇಲು, ರಾಜೇಶ್ ಮಾಸ್ತರ್ ಆಗಲ್ಪಾಡಿ ಶುಭಹಾರೈಸಿದರು, ದಿವ್ಯ ಟೀಚರ್ ಸ್ವಾಗತಿಸಿ, ನಾರಾಯಣ ಅಸ್ರ ಕಾರ್ಯಕ್ರಮ ನಿರೂಪಿಸಿದರು. ತಂಗಮಣಿ ಟೀಚರ್ ವಿದ್ಯಾಗಿರಿ ವಂದಿಸಿದರು.